ಭಾನುವಾರ, ಏಪ್ರಿಲ್ 27, 2025
Homeagricultureವ್ಯಾಲಂಟೈನ್ ಡೇ ಮೇಲೂ ಕೊರೋನಾ ಕರಿನೆರಳು….! ಕೆಂಗುಲಾಬಿ ಬೆಳೆಗಾರರ ಕೈಹಿಡಿಯದ ಮಾರುಕಟ್ಟೆ…!!

ವ್ಯಾಲಂಟೈನ್ ಡೇ ಮೇಲೂ ಕೊರೋನಾ ಕರಿನೆರಳು….! ಕೆಂಗುಲಾಬಿ ಬೆಳೆಗಾರರ ಕೈಹಿಡಿಯದ ಮಾರುಕಟ್ಟೆ…!!

- Advertisement -

ಎಲ್ಲ ಹಬ್ಬಗಳ ಖುಷಿಯನ್ನು ಕಸಿದುಕೊಂಡ ಕೊರೋನಾ ಪ್ರೇಮಿಗಳ ಹಬ್ಬ ವ್ಯಾಲಂಟೈನ್ ಡೇ ಮೇಲೂ ತನ್ನ ಪ್ರಭಾವ ಬೀರಿದ್ದು, ಗುಲಾಬಿ ಬೆಳೆಗಾರರಿಗೆ ಕೊರೋನಾ ಕೈಸುಡುವ ಮುನ್ಸೂಚನೆ ನೀಡಿದ್ದು, ರದ್ದಾದ ವಿಮಾನದಿಂದಾಗಿ ಪುಷ್ಪೋದ್ಯಮ ಕುಸಿಯುವ ಭೀತಿಯಲ್ಲಿದೆ.

ಫೆಬ್ರವರಿ ತಿಂಗಳು ಆರಂಭವಾಗುತ್ತಿದ್ದಂತೆ ಪ್ರೇಮಿಗಳ ದಿನಾಚರಣೆ ಸಂಭ್ರಮ ನಿಧಾನಕ್ಕೆ ಗರಿಗೆದರುತ್ತದೆ. ಕರ್ನಾಟಕದಿಂದ ವಿದೇಶಕ್ಕೆ ಕೆಂಗುಲಾಬಿ ರಫ್ತು ಮಾಡುವ ಬೆಳೆಗಾರರಿಗೂ ಈ ತಿಂಗಳು ಕೈತುಂಬ ಆದಾಯ ತಂದು ವರ್ಷದ ಶ್ರಮಕ್ಕೆ ಬೆಲೆ ಬರುತ್ತದೆ. ಆದರೆ ಈ ಭಾರಿ ಕೊರೋನಾ ಎಫೆಕ್ಟ್ ನಿಂದ ಗುಲಾಬಿ ಹೂವು ರಫ್ತಿನ ಮೇಲೆ ಹೊಡೆತ ಬಿದ್ದಿದ್ದು, ಅದನ್ನೇ ನಂಬಿದ ಬೆಳೆಗಾರರು ಕಂಗಾಲಾಗಿದ್ದಾರೆ.

ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಸರಬರಾಜು ಕೇಂದ್ರವೂ ವಿದೇಶಗಳಿಗೆ ಗುಲಾಬಿ ಪೊರೈಸುವ ಪ್ರಮುಖ  ಸಂಸ್ಥೆಯಾಗಿದ್ದು,ಇಲ್ಲಿಂದ ದೇಶದ ಪ್ರಮುಖ ಹಾಗೂ ವಿದೇಶಗಳಿಗೆ ಗುಲಾಬಿ ರಫ್ತಾಗುತ್ತದೆ.  ಬಹುತೇಕ ಅರಬ್ ಮತ್ತು ಯುರೋಪ ರಾಷ್ಟ್ರಗಳಿಗೆ ಗುಲಾಬಿ ಹೆಚ್ಚು ಪೊರೈಕೆಯಾಗುತ್ತದೆ.

ಆದರೆ ಕೊರೋನಾದಿಂದ ವಿಮಾನಯಾನ ರದ್ದುಗೊಂಡಿದೆ. ಸೀಮಿತ ವಿಮಾನಗಳ ಹಾರಾಟವಿದ್ದು ರಫ್ತಿಗೆ ಕಾರ್ಗೋ ದರವೂ ಏರಿದೆ. ಹೀಗಾಗಿ ವಿದೇಶಗಳಿಗೆ ರಫ್ತಾಗುವ ಗುಲಾಬಿ ಇಲ್ಲೇ ಉಳಿದುಹೋಗಲಿದೆ. ಇದರಿಂದ ಫೆಬ್ರವರಿಯಲ್ಲಿ ಹೆಚ್ಚಿನ ದರ ದಾಖಲಿಸುತ್ತಿದ್ದ ಗುಲಾಬಿ ಮಾರಾಟ ಈ ಭಾರಿ ಕುಸಿತ ಕಾಣಲಿದೆ.

ನವೆಂಬರ್ ನಿಂದ ಫೆಬ್ರವರಿ ವರೆಗೆ ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಕೊರೋನಾದಿಂದ ಮದುವೆ-ಸಮಾರಂಭಗಳು ರದ್ದಾಗಿದ್ದರಿಂದ  ಹೂವಿಗೆ ಬೇಡಿಕೆ ಬರುತ್ತಿಲ್ಲ. ನವೆಂಬರ್ ನಲ್ಲಿ ಒಂದು ಹೂವು ಗರಿಷ್ಟ 31 ರೂಪಾಯಿ ಪಡೆದಿದ್ದೇ  ಸಾಧನೆ ಎಂದು ನೋವಿನಿಂದ ಹೇಳುತ್ತಾರೆ ಬೆಳೆಗಾರರು.

ಫೆಬ್ರವರಿ ಎರಡನೇ ವಾರದಲ್ಲಿ ಗುಲಾಬಿ ದರ ಕೊಂಚ ಏರಿಕೆಯಾಗುವ ಸಾಧ್ಯತೆ ಇದ್ದರೂ, ವಿದೇಶಗಳಿಗೆ ರಫ್ತಾಗೋ ಸಾಧ್ಯತೆ ಕಡಿಮೆ ಇರೋದರಿಂದ ಬೆಳೆಗಾರರಿಗೆ ಹೆಚ್ಚಿನ ಲಾಭವಾಗುವ ನೀರಿಕ್ಷೆ ಇಲ್ಲ. ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡಲು, ಹೊಟೇಲ್, ರೆಸ್ಟೋರೆಂಟ್,ಪಾರ್ಟಿ ಹಾಲ್ ಗಳ ಡೆಕೊರೇಶನ್ ಗೆ ಹೆಚ್ಚು ಬಳಕೆಯಾಗೋದರಿಂದ ಗುಲಾಬಿಯ ಹಾಟ್ ಶಾಟ್, ಕಾರ್ವೆಟ್,ರಾಕ್ ಸ್ಟಾರ್,ಬ್ರಿಲಿಯೆಂಟ್, ಫರ್ಸ್ಟ್ ರೆಡ್ ತಳಿಗಳಿಗೆ ಹೆಚ್ಚು ಬೇಡಿಕೆ ಇದೆ.

ಕರ್ನಾಟಕದ ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಲಾಬಿ ವಾಣಿಜ್ಯ ಬೆಳೆಯಂತೆ  ಬೆಳೆದುಕೊಂಡು ಬರುತ್ತಿದ್ದು, ಈ ವರ್ಷ ಬೆಳೆಗಾರರು ಕೊರೋನಾದಿಂದ ವರ್ಷದ ಆದಾಯದಲ್ಲಿ ಕುಸಿತಕಾಣೋ ಸ್ಥಿತಿ ಎದುರಾಗಿದೆ.

RELATED ARTICLES

Most Popular