ಬೆಂಗಳೂರು: ಕಳೆದ ಎರಡು-ಮೂರು ತಿಂಗಳಿನಿಂದ ರಾಜ್ಯ ಬಿಜೆಪಿ ನಾಯಕರು ಹಾಗೂ ಸಿಎಂ ಬಿಎಸ್ವೈ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ ಬಾಯಿಗೆ ಬೀಗ ಬೀಳುವ ಕಾಲ ಸನ್ನಹಿತವಾಗಿದೆ. ಅತಿರೇಕದ ಹೇಳಿಕೆಗಳಿಗೆ ಕಾರಣ ಕೇಳಿ ಬಿಜೆಪಿ ಹೈಕಮಾಂಡ್ ಯತ್ನಾಳ್ ಗೆ ನೊಟೀಸ್ ಜಾರಿ ಮಾಡಿದೆ.

ಸಂಕ್ರಾಂತಿ ಬಳಿಕ , ಯುಗಾದಿ ಬಳಿಕ ಬಿಜೆಪಿ ನಾಯಕತ್ವ ಬದಲಾಗಲಿದೆ. ಉತ್ತರ ಕರ್ನಾಟಕದ ನಾಯಕರು ಸಿಎಂ ಆಗಲಿದ್ದಾರೆ ಎಂಬುದು ಸೇರಿದಂತೆ ಹಲವು ಹೇಳಿಕೆಗಳ ಮೂಲಕ ರಾಜ್ಯ ಬಿಜೆಪಿ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್.

ರಾಜ್ಯದಲ್ಲಿ ಸಿಎಂ ಬಿಎಸ್ವೈ ನಾಯಕತ್ವ ಬದಲಾಗಲಿದೆ. ಉತ್ತರ ಕರ್ನಾಟಕ ಭಾಗದವರು ಸಿಎಂ ಆಗಲಿದ್ದಾರೆ ಎಂದು ಹಲವಾರು ಭಾರಿ ಶಾಸಕ ಬಸನಗೌಡ್ ಯತ್ನಾಳ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಹಾಗೂ ಸಿಎಂ ಬಿಎಸ್ವೈಗೆ ಮುಜುಗರ ತಂದಿದ್ದರು. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಹಲವಾರು ಪಕ್ಷದ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ್ದರು. ಆದರೆ ರಾಜ್ಯ ಬಿಜೆಪಿ ಯತ್ನಾಳ್ ಹುಚ್ಚಾಟಗಳಿಗೆ ಕಡಿವಾಣ ಹಾಕಲಾಗದೇ ಮೌನವಾಗಿತ್ತು.

ಇದೀಗ ಬಸನಗೌಡ್ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಸಿಎಂ ಬಿಎಸ್ವೈ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಬಿಜೆಪಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಬಿಫಾರಂ ನೀಡಿತ್ತು. ಹೀಗಾಗಿ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮನವಿ ಮಾಡಿತ್ತು.

ಹೀಗಾಗಿ ಪಕ್ಷಕ್ಕೆ ಹಾಗೂ ಪಕ್ಷದ ನಾಯಕರಿಗೆ ಮುಜುಗರ ತರುವ ಹಲವಾರು ಹೇಳಿಕೆಗಳ ಬಳಿಕ ಯತ್ನಾಳ್ ಗೆ ಶೋಕಾಸ್ ನೊಟೀಸ್ ಜಾರಿಯಾಗಿದೆ. ಕೇಂದ್ರ ಶಿಸ್ತು ಒಂದು ವಾರದಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಆ ಮೂಲಕ ಬಸನಗೌಡ್ ಪಾಟೀಲ್ ಯತ್ನಾಳ್ ಎರಡನೇ ಬಾರಿ ಶೋಕಾಸ್ ನೊಟೀಸ್ ಪಡೆದಂತಾಗಿದೆ. 2019 ರ ಪ್ರವಾಹದ ವೇಳೆ ಕೇಂದ್ರ ನಾಯಕರ ವಿರುದ್ಧವೇ ಹೇಳಿಕೆ ನೀಡಿದ್ದ ಯತ್ನಾಳ್ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.