ವಿಶೇಷ ಪ್ಯಾಕೇಜ್ ನೀಡಿ ರಾಜ್ಯವನ್ನು 1 ತಿಂಗಳು ಲಾಕ್ ಡೌನ್ ಮಾಡಿ…! ಹಾಲಿಸಿಎಂಗೆ ಮಾಜಿಸಿಎಂ ಸಲಹೆ…!!

ಕೊರೋನಾ ಎರಡನೇ ಅಲೆಗೆ ನಲುಗಿ ಹೋಗಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಈ ನಿಟ್ಟಿನಲ್ಲಿ ಈಗ ಜಾರಿಯಲ್ಲಿರುವ ಲಾಕ್ ಡೌನ್ ನ್ನು ಸಂಪೂರ್ಣ ಲಾಕ್ ಡೌನ್ ಗೆ ಬದಲಾಯಿಸಿ ಒಂದು ತಿಂಗಳ ಕಾಲ ಜಾರಿಗೆ ತರುವಂತೆ ಮಾಜಿಸಿಎಂ ಎಚ್ಡಿಕೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಸೋಂಕಿನ ಪ್ರಮಾಣ ಲಾಕ್ ಡೌನ್ ಬಳಿಕ ಇಳಿಕೆಯಾಗುತ್ತಿದೆ. ಹೀಗಾಗಿ ಸಂಪೂರ್ಣ ರಾಜ್ಯ ಲಾಕ್ ಡೌನ್ ಮಾಡುವುದು ಉತ್ತಮವಾದ ನಿರ್ಧಾರ. ಹೀಗಾಗಿ ಸಿಎಂ ಬಿಎಸ್ವೈ 1 ತಿಂಗಳ ಕಾಲ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡಬೇಕು ಎಂದು ಎಚ್ಡಿಕೆ ಅಭಿಪ್ರಾಯಿಸಿದ್ದಾರೆ.

https://kannada.newsnext.live/corona-patient-out-come-home-criminal-case-udupi-dc/

ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ,  ರಾಜ್ಯದ ಶ್ರಮಿಕ ವರ್ಗಕ್ಕೆ ಸಿಎಂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಉಳಿದ ರಾಜ್ಯಗಳಿಗೆ ಹೋಲಿಸಿದರೇ ರಾಜ್ಯದ ಆರ್ಥೀಕ ಸ್ಥಿತಿ ಸಧೃಡವಾಗಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು.

https://kannada.newsnext.live/covid-vaccine-get-113-police-corona-positive/

ಶ್ರಮಿಕವರ್ಗಕ್ಕೆ, ಕಾರ್ಮಿಕವರ್ಗಕ್ಕೆ ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸರ್ಕಾರ 1 ತಿಂಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದು ಒಳ್ಳೆಯ ಕ್ರಮ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಮಧ್ಯೆ ತಜ್ಞರ ಸಮಿತಿ ಕೂಡ ಪ್ರಸ್ತುತ  ಇರುವ ಲಾಕ್ ಡೌನ್ ನ್ನು ಇನ್ನೊಂದೆರಡು ವಾರಗಳ ಕಾಲ ಮುಂದುವರೆಸುವುದು ಸೂಕ್ತಎಂದು ಅಭಿಪ್ರಾಯಿಸಿದೆ ಎನ್ನಲಾಗಿದೆ. ಗುರುವಾರ ಸಿಎಂ ಬಿಎಸ್ವೈ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ರಾಜ್ಯದ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ.

Comments are closed.