ಮಂಗಳವಾರ, ಏಪ್ರಿಲ್ 29, 2025
HomeBreakingಮತ್ತೆ ಬರಿಗೈಯಲ್ಲಿ ಮರಳಿದ ಸಿಎಂ ಬಿಎಸ್ವೈ…! ಹೈಕಮಾಂಡ್ ಕೈಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಭವಿಷ್ಯ…!

ಮತ್ತೆ ಬರಿಗೈಯಲ್ಲಿ ಮರಳಿದ ಸಿಎಂ ಬಿಎಸ್ವೈ…! ಹೈಕಮಾಂಡ್ ಕೈಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಭವಿಷ್ಯ…!

- Advertisement -

ಬೆಂಗಳೂರು: ಹೈಕಮಾಂಡ್ ಅಂಗಳಕ್ಕೆ ಜಾರಿದ್ದ ಸಚಿವ ಸಂಪುಟ ವಿಸ್ತರಣೆ ಚೆಂಡು ಮತ್ತೆ ಅದೇ ವೇಗದಲ್ಲಿ ರಾಜ್ಯ ರಾಜಧಾನಿಗೆ ಶಿಫ್ಟ್ ಆಗಿದ್ದು, ಸಚಿವ ಸ್ಥಾನದ ಲಿಸ್ಟ್ ಜೊತೆ ಬರಬೇಕಿದ್ದ ಸಿಎಂ ಬಿಎಸ್ವೈ ಬರಿಗೈಯಲ್ಲಿ ಮರಳಿದ್ದಾರೆ. ಈ ಬೆಳವಣಿಗೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರುಗಳ ನಿದ್ದೆಗೆಡಿಸಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಂದು ರಾಜ್ಯದಲ್ಲಿ  ನೂತನ ಸಚಿವರುಗಳು ಸಂಭ್ರಮಾಚರಣೆಯಲ್ಲಿ ತೊಡಗಬೇಕಿತ್ತು. ಆದರೆ ಬಿಜೆಪಿ ಹೈಕಮಾಂಡ್  ನೀರಸ ಪ್ರತಿಕ್ರಿಯೆಯಿಂದ ಸಚಿವ ಸ್ಥಾನದ ಆಕಾಂಕ್ಷೆಯಲ್ಲಿದ್ದ ಶಾಸಕರು ಮತ್ತೊಮ್ಮೆ  ನಿರಾಸೆಗೊಂಡಿದ್ದಾರೆ. ಸಿಎಂ ಬಿಎಸ್ವೈ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತಫಿಕ್ಸ್ ಆಗುತ್ತಲೇ ಇದೆ.

ಆದರೆ ನಿಗದಿಯಾದ ಯಾವ ಮುಹೂರ್ತದಲ್ಲೂ ಸಂಪುಟ ವಿಸ್ತರಣೆಯಾಗಲಿ, ಪುನರ್ ರಚನೆಯಾಗಲಿ ಆಗಿಲ್ಲ. ದಸರಾ,ದೀಪಾವಳಿ ಎಲ್ಲವೂ ಮುಗಿದಿದೆ. ಆದರೂ ಸಂಪುಟ ಪುನರ್ ರಚನೆಯಾಗುವ ಲಕ್ಷಣವಿಲ್ಲ. ಉಪಚುನಾವಣೆ ಬಳಿಕ ಪಕ್ಕಾ ಸಚಿವ ಸ್ಥಾನ ಸಿಗುತ್ತೆ ಎಂಬ ನೀರಿಕ್ಷೆಯಲ್ಲಿದ್ದ ಶಾಸಕರಿಗೆ ಬುಧವಾರ ಸಿಎಂ ದೆಹಲಿಗೆ ತೆರಳಿದ್ದು  ಮತ್ತಷ್ಟು ಉತ್ಸಾಹ ತಂದಿತ್ತು.

ಆದರೆ ಹೈಕಮಾಂಡ್ ಭೇಟಿಗೆ ತೆರಳಿದ್ದ ಸಿಎಂ ಬಿಎಸ್ವೈ ಹೋದ ವೇಗದಲ್ಲೇ ವಾಪಸ್ಸಾಗಿದ್ದು, ಸಚಿವ ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆ ಎಲ್ಲವೂ ಹೈಕಮಾಂಡ್ ವಿವೇಚನೆಗೆ ಬಿಟ್ಟ ನಿರ್ಧಾರ. ಹೈಕಮಾಂಡ್ ಎಲ್ಲವನ್ನು ನಿರ್ಧರಿಸಿ ಲಿಸ್ಟ್ ಕಳುಹಿಸಲಿದೆ. ಹೈಕಮಾಂಡ್ ಆದೇಶದಂತೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗಲಿದೆ ಎಂದಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಹೈಕಮಾಂಡ್ ರಾಜ್ಯದ ಸೂಕ್ಷ್ಮ ರಾಜಕೀಯ ಪರಿಸ್ಥಿತಿ ಅರಿತು ಸೂಕ್ತವಾದ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಬಿಎಸ್ವೈ ಸಮ್ಮುಖದಲ್ಲಿ ನಿರ್ಣಯವಾದಲ್ಲಿ ಮತ್ತೆ ಆಂತರಿಕ ಕಚ್ಚಾಟಗಳು ರಂಭವಾಗೋ ಸಾಧ್ಯತೆ ಇರೋದರಿಂದ ಸಿಎಂರನ್ನು ಹೊರಗಿಟ್ಟು ನಿರ್ಣಯಕೈಗೊಳ್ಳಲು ನಡ್ಡಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಹೀಗಾಗಿ ಪಕ್ಷದ ಹಿರಿಯರ ಜೊತೆ ಸಮಾಲೋಚನೆ ಬಳಿಕವಷ್ಟೇ ಯಾರಿಗೆ ಸಚಿವ ಸ್ಥಾನ ಹಾಗೂ ಯಾರಿಗೆ ಸಂಪುಟದಿಂದ ಖೋಕ್ ಎಂಬುದು ನಿರ್ಧಾರವಾಗಲಿದೆ.

ಇದೇ ಕಾರಣಕ್ಕೆ ಲಿಸ್ಟ್ ಅಂತಿಮಗೊಳಿಸಲು ಹೈಕಮಾಂಡ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎನ್ನಲಾಗುತ್ತಿದೆ. 7 ಸಚಿವ ಸ್ಥಾನಕ್ಕೆ 10 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪಕ್ಷ ತೊರೆದು ಬಿಜೆಪಿ ಜೊತೆ ಕೈ ಜೋಡಿಸಿದ ಶಾಸಕರನ್ನು ಸಮಾಧಾನ ಪಡಿಸುವ ಹೊಣೆ ಹೈಕಮಾಂಡ್ ಮೇಲಿದೆ. ಹೀಗಾಗಿ ಅಳೆದು-ಸುರಿದು-ತೂಗಿ ಬಿಜೆಪಿ ಹೈಕಮಾಂಡ್ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ನಿರ್ಣಯಕೈಗೊಳ್ಳಲಿದ್ದು, ಯಾವಾಗ ಲಿಸ್ಟ್ ಹೊರಬರುತ್ತೆ ಅನ್ನೋದೇ ಸಧ್ಯದ ಕುತೂಹಲ.

RELATED ARTICLES

Most Popular