ಭಾನುವಾರ, ಏಪ್ರಿಲ್ 27, 2025
HomeBreakingಸಿದ್ದು ಗೋಮಾಂಸ ತಿಂತಿನಿ ಅಂತಾರೆ…! ಡಿಕೆಶಿ ಗೋಪೂಜೆ ಮಾಡ್ತಾರೆ…! ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ..!!

ಸಿದ್ದು ಗೋಮಾಂಸ ತಿಂತಿನಿ ಅಂತಾರೆ…! ಡಿಕೆಶಿ ಗೋಪೂಜೆ ಮಾಡ್ತಾರೆ…! ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ..!!

- Advertisement -

ಬೆಂಗಳೂರು: ಗೋಹತ್ಯೆ ಬೆಂಬಲಿಸಿ ಸದಾ ಒಂದಿಲ್ಲೊಂದು ಹೇಳಿಕೆ‌ ನೀಡಿ ಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೇ ಇತ್ತ ಕೆಪಿಸಿಸಿ ಅಧ್ಯಕ್ಷರು ಗೋಪೂಜೆ ಮಾಡಿ‌ಗಮನ ಸೆಳೆದಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾದಾಗಿನಿಂದ ಗೋಮಾಂಸದ ಕುರಿತು ದಿನಕ್ಕೊಂದು ಹೇಳಿಕೆ ನೀಡಿ ಮಾಜಿ ಸಿಎಂ ಸಿದ್ದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ.

ಅಷ್ಟೇ ಅಲ್ಲ ಕಾಂಗ್ರೆಸ್ ಗೋಹತ್ಯೆ‌ನಿಷೇಧ ಕಾನೂನು ಜಾರಿ ಕುರಿತು ತನ್ನ ನಿಲುವು ಪ್ರಕಟಿಸಬೇಕೆಂದು ಸಿದ್ಧು ಒತ್ತಾಯಿಸುತ್ತಲೇ ಬಂದಿದ್ದಾರೆ.ಡಿಕೆಶಿ ಹಾಗೂ ಸಿದ್ದ ಪರ ವಿರೋಧವಾಗಿ ಬಿಸಿ ಬಿಸಿ ಚರ್ಚೆಯೂ ಜೋರಾಗಿದೆ.

ಆದರೆ‌ ಇದ್ಯಾವುದಕ್ಕೂ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಯಾರೇ ಎಂದಿಲ್ಲ. ಹೀಗಾಗಿ ಗೋಹತ್ಯೆ ಹಾಗೂ ಗೋಮಾಂಸದ ವಿಚಾರದಲ್ಲಿ ಸೃಷ್ಟಿಯಾದ ಅನಗತ್ಯ ವಿವಾದಕ್ಕೆ ಸಿದ್ದು ಏಕಾಂಗಿ ಹೊಣೆಗಾರ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಈ ಮಧ್ಯೆ ಇಂದು ಮಕರ ಸಂಕ್ರಮಣದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವ‌ ನಗರದ ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿ ಗಮನ ಸೆಳೆದಿದ್ದಾರೆ.

ಡಿಕೆಶಿ ಗೋ ಪೂಜೆ ನೆರವೇರಿಸಿರುವ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಡಿಕೆಶಿಯನ್ನು ಹೊಗಳುತ್ತ ಸಿದ್ದು ಟೀಕಿಸುತ್ತಿದ್ದಾರೆ.

ಸಿದ್ದರಾಮಯ್ಯ ಗೋವಿವಾದಕ್ಕೆ ಸಿಲುಕಿರೋದು ಸ್ವತಃ ಕಾಂಗ್ರೆಸ್ಸಿಗರಿಗೂ ಮುಜುಗರ ತಂದಿದೆ ಎನ್ನಲಾಗಿದ್ದು ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಈ ವಿವಾದದಿಂದ ದೂರ ಉಳಿಯಲು ಕಾಂಗ್ರೆಸ್ಸಿನ ಇತರ ನಾಯಕರು ನಿರ್ಧರಿಸಿದ್ದಾರೆ.

ಅಲ್ಲದೇ ಸಿದ್ಧರಾಮಯ್ಯನವರಿಗೆ ಪರೋಕ್ಷ ಟಾಂಗ್‌ ನೀಡೋದಿಕ್ಕೆ ಡಿಕೆಶಿ ಅದ್ದೂರಿ ಗೋಪೂಜೆ ನಡೆಸಿದ್ದಾರೆ ಎಂಬ ಮಾತು‌ಕೇಳಿಬಂದಿದೆ.

RELATED ARTICLES

Most Popular