ಹಕ್ಕಿಜ್ವರ ಹಿನ್ನೆಲೆ ಮೊಟ್ಟೆ, ಕೋಳಿ ಮಾಂಸ ಮಾರಾಟ ನಿಷೇಧ..!

ನವದೆಹಲಿ :  ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ, ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ.

ದೆಹಲಿಯ ಆರೋಗ್ಯ ಇಲಾಖೆ ಚೆನ್ನಾಯಿ ಬೇಯಿಸಿದ ಮೊಟ್ಟೆ ಹಾಗೂ ಕೋಳಿಯನ್ನು ಸೇವಿಸಬಹುದು ಎಂದು ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಅರ್ಧ ಬೆಂದಿರುವ ಮೊಟ್ಟೆ, ಕೋಳಿಯ ಖಾದ್ಯಗಳನ್ನು ಸೇವನೆ ಮಾಡದಂತೆ ಸೂಚನೆಯನ್ನು ನೀಡಿದೆ.

ಈ ನಡುವಲ್ಲೇ ಹಕ್ಕಿ ಜ್ವರದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ನಾರ್ತ್ ಮತ್ತು ಸೌತ್ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಜನವರಿ 13 ರಂದು ಕೋಳಿ ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಎರಡೂ ಪ್ರದೇಶಗಳ ರೆಸ್ಟೋರೆಂಟ್ ಗಳಲ್ಲಿ ಕೋಳಿ ಅಥವಾ ಮೊಟ್ಟೆ ಆಧಾರಿತ ಭಕ್ಷ್ಯಗಳನ್ನು ಬ್ಯಾನ್ ಮಾಡಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

Comments are closed.