ಸೋಂಕಿನ ಲಕ್ಷಣಗಳಿದ್ದರೂ ವಿದ್ಯಾರ್ಥಿಗಳಿಗೆ ನಡೆಯುತ್ತಿಲ್ಲ ಕೊರೊನಾ ಟೆಸ್ಟ್ : ಕೊರೊನಾ‌ ಹಾಟ್ ಸ್ಟಾಟ್ ಅಗ್ತಿವ್ಯಾ ಶಾಲೆಗಳು..?

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ‌. ಕೊರೊನಾ ನಡುವಲ್ಲೇ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ತರಗತಿಗಳು ನಡೆಯುತ್ತಿವೆ. ಆದರೆ ಶಾಲೆಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೂ ವಿದ್ಯಾರ್ಥಿಗಳಿಗೆ ಮಾತ್ರ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ.

ಕೊರೊನಾ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ. ಈಗಾಗಲೇ 20ಕ್ಕೂ ಅಧಿಕ ರಾಜ್ಯಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿಯೂ 1 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಕೊರೊನಾ‌ ಸೋಂಕಿನ ನಡುವಲ್ಲೇ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಸ್ಎಸ್ಎಲ್‌ ಸಿ ಹಾಗೂ ಪಿಯುಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆ ಕೊರೊನಾ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದಾಗಿ ಹೇಳುತ್ತಿದೆ. ಆದರೆ ವಾಸ್ತವಿಕ ಸ್ಥಿತಿಯೇ ಬೇರೆಯದಾಗಿದೆ.

ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ದೇಹ ಸ್ಥಿತಿಯನ್ನು ಪರೀಕ್ಷೆ ನಡೆಸಲಾಗುತ್ತಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಜ್ವರ, ಶೀತ, ನೆಗಡಿ ಲಕ್ಷಣಗಳು ಕಂಡು ಬಂದರೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ‌. ಕೆಲವೊಂದು ಕಡೆಗಳ ಲ್ಲಿ ಶಾಲೆಯಲ್ಲಿಯೇ ಕೂರಿಸ ಲಾಗುತ್ತಿದೆ‌. ಆದರೆ ಕೊರೊನಾ ಸೋಂಕಿನ ಲಕ್ಷಣ ಗಳಿದ್ದರೂ ಕೂಡ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಟೆಸ್ಟ್ ‌ನಡೆಸುತ್ತಿಲ್ಲ.

ಶಾಲೆಗಳು ಆರಂಭಗೊಂಡಿದ್ದರೂ ಕೂಡ ಇದುವರೆಗೂ ವಿದ್ಯಾರ್ಥಿ ಗಳಿಗೆ ಕೊರೊನಾ ಟೆಸ್ಟ್ ನಡೆಸಿಲ್ಲ. ದೇಶದಲ್ಲಿ ಎರಡನೇ ಅಲೇ ಹೆಚ್ಚಾಗಿ ಮಕ್ಕಳನ್ನು ಕಾಡುತ್ತಿದ್ದು, ಅಂಕಿ ಅಂಶಗಳಿಂದಲೇ ಸಾಭೀತಾಗಿದೆ. ಆದರೆ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆ ಹಾಗೂ ಸಚಿವರು ಪದೇ ಪದೇ ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡುತ್ತಿ ದ್ದಾರೆ. ಆದರೆ ವಿದ್ಯಾರ್ಥಿ ಗಳಿಗೆ ಕೊರೊನಾ ಟೆಸ್ಟ್ ‌ನಡೆಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿ ದ್ದಾರೆ ಅಂತಾ ಪೋಷಕರು ಆರೋಪಿಸುತ್ತಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಶಾಲೆಗಳಲ್ಲಿ ವಿದ್ಯಾರ್ಥಿ ಗಳ ವಿಚಾರದಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಾ ಇರುವುದ ರಿಂದ ಶಾಲೆಗಳು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಡುವ ದಿನಗಳು ದೂರವಿಲ್ಲ.

Comments are closed.