ಭಾನುವಾರ, ಏಪ್ರಿಲ್ 27, 2025
HomeBreakingಪಂಚರಾಜ್ಯ ಚುನಾವಣೆ ಬಳಿಕ ಸಿಎಂಬದಲಾವಣೆ....! ಯತ್ನಾಳ ಹೊಸ ಬಾಂಬ್...!!

ಪಂಚರಾಜ್ಯ ಚುನಾವಣೆ ಬಳಿಕ ಸಿಎಂಬದಲಾವಣೆ….! ಯತ್ನಾಳ ಹೊಸ ಬಾಂಬ್…!!

- Advertisement -

ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ವ ಪಕ್ಷಿಯ ನಾಯಕ ಬಿಎಸ್ವೈ ವಿರುದ್ಧ ಸದಾ ಕಿಡಿಕಾರುವ ಶಾಸಕ ಯತ್ನಾಳ‌ ಮತ್ತೊಂದು ಬಾಂಬ್ ಸಿಡಿಸಿದ್ದು, ಬಿಎಸ್ವೈ ನಾಯಕತ್ವ ಬದಲಾವಣೆಗೆ ಸಮಯ ಫಿಕ್ಸ್‌ಮಾಡಿದ್ದಾರೆ.

ಪಂಚ‌ರಾಜ್ಯ‌ಚುನಾವಣೆ ಬಳಿಕ‌ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತದೆ. ಇದರಲ್ಲಿ ಅನುಮಾನವೇ ಬೇಡ ಎಂದು ಪುನರುಚ್ಛರಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ‌ಪಾಟೀಲ್‌ ಯತ್ನಾಳ, ಬಿಎಸ್ವೈ ನಾಯಕತ್ವದಲ್ಲೇ ಮುಂದುವರಿದರೇ ರಾಜ್ಯದಲ್ಲಿ ಬಿಜೆಪಿ ಮೂಲೆಗುಂಪಾಗುತ್ತದೆ ಎಂಬುದು ಹೈಕಮಾಂಡ್ ಗಮನಕ್ಕೆ‌ಬಂದಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳು ರಾಜ್ಯದ ಸ್ಥಿತಿ ಗತಿ‌ ಹಾಗೂ ಯಡಿಯೂರಪ್ಪ ಕುಟುಂಬದವರ ರಾಜಕೀಯ ಗಮನಿಸಿದ್ದಾರೆ. ಹೀಗಾಗಿ ಪಂಚ‌ರಾಜ್ಯ ಚುನಾವಣೆ ಬಳಿಕ ಬಿಎಸ್ವೈ ಸಿಎಂ ಆಗಿ ಮುಂದುವರೆಯುವುದಿಲ್ಲ ಎಂದಿದ್ದಾರೆ.

ಪಂಚ ‌ರಾಜ್ಯ‌ಚುನಾವಣೆಗೂ ಮುನ್ನ ನಾಯಕತ್ವ ಬದಲಾವಣೆಗೆ ಮುಂದಾದರೇ ಚುನಾವಣೆ ಪ್ರಚಾರದ‌ ಮೇಲೆ‌ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಹೈಕಮಾಂಡ್ ಸುಮ್ಮನಿದೆ ಎಂಬುದು ಯತ್ನಾಳ್ ಅಂಬೋಣ.


ಒಟ್ಟಿನಲ್ಲಿ ಮತ್ತೊಮ್ಮೆ ಶಾಸಕ ಯತ್ನಾಳ ಸಿಎಂ ಬದಲಾವಣೆಯ‌ ಜಪ ಆರಂಭಿಸಿದ್ದು ಬಿಜೆಪಿಯಲ್ಲಿ ಏನು‌ ನಡೀತಿದೆ ಅನ್ನೋದೆ‌ ಅರ್ಥವಾಗ್ತಿಲ್ಲ ಅಂತಿದ್ದಾರೆ ಜನರು.

RELATED ARTICLES

Most Popular