ಬುಧವಾರ, ಏಪ್ರಿಲ್ 30, 2025
HomeBreakingಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ ನಾಗರಾಜ್....! ಹೊಸ ವರ್ಷದಲ್ಲೂ ಮುಂದುವರೆಯಲಿದೆ ಹೋರಾಟ...!!

ಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ ನಾಗರಾಜ್….! ಹೊಸ ವರ್ಷದಲ್ಲೂ ಮುಂದುವರೆಯಲಿದೆ ಹೋರಾಟ…!!

- Advertisement -

ಬೆಂಗಳೂರು: ಕರ್ನಾಟಕ ಬಂದ್, ಭಾರತ ಬಂದ್ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡಲು ಕನ್ನಡ ಚಳುವಳಿ ಪಕ್ಷದ ವಾಟಾಳ ನಾಗರಾಜ್ ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ವಾಟಾಳ ನಾಗರಾಜ್, ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ಜನವರಿ ೯ ರಂದು ಮತ್ತೊಂದು ಪ್ರತಿಭಟನೆ ನಡೆಯಲಿದೆ ಎಂದಿದ್ದಾರೆ.

ಜನವರಿ 9 ರಂದು ಮುಂಜಾನೆ 9 ರಿಂದ ರಾತ್ರಿ 9 ಗಂಟೆಯವರೆಗೆ ರಾಜ್ಯದಲ್ಲಿ ರೈಲು ಬಂದ್ ನಡೆಯಲಿದ್ದು, ರೈಲ್ವೈ ಹಳಿ ಮೇಲೆ‌ ಕುಳಿತು ಪ್ರತಿಭಟನೆ ನಡೆಸಲಿದ್ದೇವೆ ಎಂದು ವಾಟಾಳ ವಿವರಣೆ ನೀಡಿದ್ದಾರೆ.ಸರ್ಕಾರ ರಚಿಸಿದ ಮರಾಠ ಅಭಿವೃದ್ದಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ವಾಟಾಳ ನಾಗರಾಜ್, ಕರ್ನಾಟಕ ಬಂದ್ ಗೆ ಕರೆ ನೀಡಿದ್ದರು. ಆದರೇ ಬಂದ್ ಗೆ ನೀರಿಕ್ಷಿತ ಯಶಸ್ಸು ಕಂಡಿರಲಿಲ್ಲ.

ಡಿಸೆಂಬರ್ 5 ರಂದು ಬೃಹತ್ ಜಾಥಾ ನಡೆಸಲು ವಾಟಾಳ‌ನಾಗರಾಜ್ ಹಾಗೂ ತಂಡ ನಿರ್ಧರಿಸಿತ್ತಾದರೂ ವಾಟಾಳ ನಾಗರಾಜ್, ಕರವೇ ನಾರಾಯಣ ಗೌಡರ ನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಪ್ರತಿಭಟನೆ ಜಾಥಾ ನಡೆಸಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಮತ್ತೊಮ್ಮೆ ಮರಾಠ ಪ್ರಾಧಿಕಾರ ರಚನೆ ಹಾಗೂ ಕೃಷಿಮಸೂದೆ ವಿರೋಧಿಸಿ ವಾಟಾಳ ನಾಗರಾಜ್ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜನವರಿ ೯ ರಂದು ರೈಲ್ವೆ ಹಳಿ ಮೇಲೆ ಪ್ರತಿಭಟನೆಗೆ ಸಿದ್ಧವಾಗಿದ್ದಾರೆ.

RELATED ARTICLES

Most Popular