NEET ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ : ಕೇಂದ್ರ ಸಚಿವ ಪೊಕ್ರಿಯಾಲ್ ಸ್ಪಷ್ಟನೆ

ನವದೆಹಲಿ : ನೀಟ್ ಪರೀಕ್ಷೆ ರದ್ದು ಪಡಿಸಲಾಗುತ್ತದೆ ಎಂಬುದು ಕೇವಲ ಸುಳ್ಳು ವದಂತಿ ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ರದ್ದಾಗುವುದಿಲ್ಲ. ನೀಟ್ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೊಕ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕ ರಾಜ್ಯಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೇ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿಂದು ಕೇಂದ್ರ ಸಚಿವರು ತಜ್ಞರೊಂದಿಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊರೋನ ಸಂಕಷ್ಟದಿಂದ ಮುಂದೂಡಿದ್ದ ಸಿಬಿಎಸ್ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಮುಂದಿನ ವರ್ಷ 2021ರಲ್ಲಿ ನಡೆಸಲಾಗುತ್ತದೆ.

ವಿದ್ಯಾರ್ಥಿಗಳು ಯಾವುದೇ ಗಲಿಬಿಲಿ, ಅತಂತಕ್ಕೆ ಒಳಗಾಗಬಾರದು. ಪರೀಕ್ಷಾ ದಿನಾಂಕ ಘೋಷಣೆಗೂ ಮೊದಲು ಪರೀಕ್ಷಾ ಸಿದ್ಧತೆಗಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಸಚಿವರು ತಿಳಿಸಿದ್ದಾರೆ.

Comments are closed.