ಸೋಮವಾರ, ಏಪ್ರಿಲ್ 28, 2025
HomeBreakingನೀಲ್ ಇತರ ಚಿತ್ರರಂಗದವರ ಹೊಟ್ಟೆ ಮೇಲೆ ಹೊಡೆದರು…! ವರ್ಮಾ ಟ್ವೀಟ್ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ…?!

ನೀಲ್ ಇತರ ಚಿತ್ರರಂಗದವರ ಹೊಟ್ಟೆ ಮೇಲೆ ಹೊಡೆದರು…! ವರ್ಮಾ ಟ್ವೀಟ್ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ…?!

- Advertisement -

ಕೆಜಿಎಫ್ ಚಿತ್ರದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಘನತೆಯನ್ನೇ ನೀಡಿದೆ. ಈ ಗೌರವ ಇನ್ನೂ ಮುಂದುವರೆದಿದ್ದು ಕೆಜಿಎಫ್-2 ಟೀಸರ್ ರಿಲೀಸ್ ಬಳಿಕ ಎಲ್ಲರನ್ನು ಸೆಳೆದ ಸ್ಯಾಂಡಲ್ ವುಡ್ ಬೇರೆ ಚಿತ್ರರಂಗದ ಹೊಟ್ಟೆ ಉರಿಸುತ್ತಿದೆ ಎಂದು ಹಿರಿಯ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ಸದಾ ವಿವಾದಗಳಿಂದಲೇ ಗುರುತಿಸಿಕೊಳ್ಳೋ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಕೆಜಿಎಫ್-2 ಟೀಸರ್ ದಾಖಲೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಜೊತೆಗೆ ಇತರರಿಗೆ ಟಾಂಗ್ ನೀಡಿದ್ದಾರೆ. ಕೆಜಿಎಫ್-2 ಟೀಸರ್ ರಿಲೀಸ್ ಆದ ಒಂದೇ ವಾರದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, 125 ಮಿಲಿಯನ್ ವೀಕ್ಷಣೆ ಪಡೆದು ಮುಂದೇ ಸಾಗಿದೆ.

ಈ ಕುರಿತು ಟ್ವೀಟ್ ಮಾಡಿರೋ ರಾಮ್ ಗೋಪಾಲ್ ವರ್ಮ, ಬಾಹುಬಲಿ ಸಿನಿಮಾ ಟ್ರೇಲರ್ 11 ಕೋಟಿ ವೀಕ್ಷಣೆ ಕಂಡಿದೆ. ಆದರೆ ಇದಕ್ಕೆ ಮೂರು ವರ್ಷ ಸಮಯ ತೆಗೆದುಕೊಂಡಿದೆ. ಆರ್.ಆರ್.ಆರ್ ಸಿನಿಮಾ 3.8 ಕೋಟಿ ವೀಕ್ಷಣೆಗೆ 3 ತಿಂಗಳು ಬೇಕಾಗಿದೆ. ಆದರೆ ಕೆಜಿಎಫ್-2 ಟ್ರೇಲರ್ ಮೂರು ದಿನದಲ್ಲಿ 14 ಕೋಟಿ ವೀಕ್ಷಣೆ ಕಂಡಿದೆ.

ಇದು ಹಲವು ಸಿನಿ ಇಂಡಸ್ಟ್ರಿಯವರ ಹೊಟ್ಟೆಯಲ್ಲಿ ಬೆಂಕಿ ಹಾಕಿದೆ ಎಂದು ನೇರವಾಗಿ ರಾಜಮೌಳಿಯನ್ನು ಕೆಣಕಿದ್ದಾರೆ. ಎಲ್ಲಾ ಕನ್ನಡಿಗರ ಪರವಾಗಿ ಪ್ರಶಾಂತ್ ನೀಲ್ ಬೇರೆ ಸಿನಿರಂಗದವರಿಗೆ ಸಖತ್ ಪಂಚ್ ನೀಡಿದ್ದಾರೆ ಎಂದಿರುವ ವರ್ಮಾ, ನೀಲ್ ನೀಡಿದ ಪಂಚ್ ಗೆ ಬೇರೆ ಚಿತ್ರರಂಗದವರ ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ.

ಇನ್ನು ವರ್ಮಾ ಹೇಳಿಕೆಗೆ ಹಲವು ಸಿನಿರಂಗದ ಗಣ್ಯರಿಗೆ ಇರಿಸು ಮುರಿಸು ತಂದಿತ್ತಿದೆ. ಆದರೆ ಯಶ್ ಕೆಜಿಎಫ್ ವೇಳೆ ನಮ್ಮ ಚಿತ್ರ ಬಾಲಿವುಡ್, ಟಾಲಿವುಡ್ ಜೊತೆಗಲ್ಲ ಹಾಲಿವುಡ್ ಜೊತೆ ಸ್ಪರ್ಧಿಸಲು ಸಿದ್ಧವಾಗಿದೆ ಎಂದಿದ್ದರು.

ಒಟ್ಟಿನಲ್ಲಿ ವರ್ಮಾ ಕೆಜಿಎಫ್-2 ಶ್ಲಾಘಿಸುತ್ತ ಇತರರಿಗೆ ಟಾಂಗ್ ನೀಡುವ ಕೆಲಸಕ್ಕೆ ಮುಂದಾಗಿದ್ದು ಹಲವರು ವರ್ಮಾ ಬೆಂಕಿ ಹಚ್ಚುವ ಯತ್ನ ಮಾಡ್ತಿದ್ದಾರೆ ಅಂತ ಟೀಕಿಸಿದ್ದಾರೆ.

RELATED ARTICLES

Most Popular