ಕೊರೊನಾ ಲಸಿಕೆ ಪಡೆದ 52 ಮಂದಿಯ ಮೇಲೆ ಅಡ್ಡಪರಿಣಾಮ..!

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ -19 ಲಸಿಕೆಯನ್ನು ನೀಡಲಾಗುತ್ತಿದೆ. ಅದ್ರಲ್ಲೂ ದೆಹಲಿಯಲ್ಲಿ ಕೋವಿಡ್ ಲಸಿಕೆ ಪಡೆದ ಸುಮಾರು 52 ಜನರಲ್ಲಿ ಅಡ್ಡ ಪರಿಣಾಮವನ್ನುಂಟು ಮಾಡಿದೆ ಎಂದು ದೆಹಲಿ ಸರಕಾರ ಘೋಷಣೆ ಮಾಡಿದೆ.

ಆರಂಭಿಕ ಹಂತದಲ್ಲಿ 8,117 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ ಆರೋಗ್ಯ ಇಲಾಖೆಯ 4,319 ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ ದೆಹಲಿ ದಕ್ಷಿಣದಲ್ಲಿ 11, ಆಗ್ನೇಯ ದೆಹಲಿಯಲ್ಲಿ 11, ದೆಹಲಿ ಪಶ್ಚಿಮದಲ್ಲಿ 6, ದೆಹಲಿ ಕೇಂದ್ರದಲ್ಲಿ 2, ನವದೆಹಲಿಯಲ್ಲಿ 2 ಪ್ರಕರಣ ದಾಖಲಾಗಿದೆ. ಅದ್ರಲ್ಲೂ ದೆಹಲಿ ಪೂರ್ವ, ದಕ್ಷಿಣ ಹಾಗೂ ಪಶ್ಚಿಮದಲ್ಲಿ ದಾಖಲಾಗಿರುವ 5ಕ್ಕೂ ಅಧಿಕ ಪ್ರಕರಣಗಳು ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದೆ.

ಕೊರೊನಾ ಲಸಿಕೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಅಡ್ಡಪರಿಣಾಮವನ್ನುಂಟು ಮಾಡಿತ್ತು. ನಂತರದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಆದರೆ ದೇಶದಾದ್ಯಂತ ಒಟ್ಟು 1,91,181 ಮಂದಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ವ್ಯಾಕ್ಸಿನೇಷನ್ ನೀಡಿದ ನಂತರ ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

Comments are closed.