ಚುಟು ಚುಟು ಅಂತೈತಿ ಎನ್ನುತ್ತಲೇ ಕನ್ನಡಿಗರ ಮನಗೆದ್ದ ಮುದ್ದು ಮುಖದ ಬೆಡಗಿ ಆಶಿಕಾ ರಂಗನಾಥ್, ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ, ತಮಿಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಆಶಿಕಾ ರಂಗನಾಥ್ ತಮಿಳಿನಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು, ಕಲವಾಣಿಯಂತಹ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಎ.ಸಕುರ್ಣ ಅವರ ಸಿನಿಮಾದಲ್ಲೇ ನಟಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆಶಿಕಾಗೆ ಖ್ಯಾತ ಕವಿ ಸಿದ್ಧಲಿಂಗಯ್ಯನವರ ಮೊಮ್ಮಗ ಅಥರ್ವ್ ಮುರುಳಿ ನಾಯಕರಾಗಿದ್ದು, 2’0, ಐಗಳಂತಹ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕರು ಬಂಡವಾಳ ಹೂಡುತ್ತಿದ್ದಾರೆ. ಕಬ್ಬಡ್ಡಿ ಮೈದಾನದ ಬ್ಯಾಕ್ ಗ್ರೌಂಡಿನಲ್ಲಿ ನಡೆಯೋ ಈ ಕತೆಯನ್ನು ಕೇಳಿ ಇಷ್ಟಪಟ್ಟು ಆಶಿಕಾ ಸಿನಿಮಾಕ್ಕೆ ಒಕೆ ಎಂದಿದ್ದಾರೆ.

ಸದ್ಯ ಮದಗಜ ಸಿನಿಮಾದಲ್ಲಿ ನಟಿಸುತ್ತಿರುವ ಆಶಿಕಾ ಈ ಸಿನಿಮಾ ಶೂಟಿಂಗ್ ಪೂರ್ತಿಯಾದ ಬಳಿಕ ತಮಿಳು ಸಿನಿಮಾ ಶೂಟಿಂಗ್ ಗೆ ಹಾಜರಾಗಲಿದ್ದಾರಂತೆ. ಕನ್ನಡದಲ್ಲಿ ಗಣೇಶ ಸೇರಿದಂತೆ ಹಲವು ಸ್ಟಾರ್ ಗಳಿಗೆ ನಾಯಕಿಯಾಗಿರುವ ಆಶಿಕಾ ತಮಿಳಿಗೂ ಎಂಠ್ರಿಕೊಟ್ಟಿದ್ದಾರೆ.

ಅಗಸ್ಟ್ 5 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆಶಿಕಾ ರಂಗನಾಥ ಕೊರೋನಾದಿಂದಾಗಿ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದ್ದು, ಎಲ್ಲರೂ ಸುರಕ್ಷಿತವಾಗಿರಿ ಅದೇ ನನಗೆ ನೀವು ಸಲ್ಲಿಸುವ ಅಭಿಮಾನ ಎಂದು ಫ್ಯಾನ್ಸ್ ಗೆ ಮನವಿ ಮಾಡಿದ್ದಾರೆ.