Flipkart:ಫ್ಲಿಪ್ ಕಾರ್ಟ್ ಗೆ ಇಡಿ ಸಂಕಷ್ಟ….! 35 ಬಿಲಿಯನ್ ಡಾಲರ್ ದಂಡ ವಿಧಿಸುವ ಎಚ್ಚರಿಕೆ…!!

ಹೊಸದಿಲ್ಲಿ: ವಿದೇಶಿ ವಿನಿಯಮ ನಿಯಮ ಉಲ್ಲಂಘನೆ ಆರೋಪದಡಿ ವಿಶ್ವದ ಅತಿದೊಡ್ಡ ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ಗೆ ಇಡಿ ನೊಟೀಸ್ ಜಾರಿ ಮಾಡಿದೆ.ಮಾತ್ರವಲ್ಲ 35 ಬಿಲಿಯನ್ ಡಾಲರ್ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಫ್ಲಿಪ್ ಕಾರ್ಟ್ ನ ಸಂಸ್ಥಾಪಕ ಹಾಗೂ ಇತರೇ 9 ಜನರಿಗೆ ಇಡಿ ನೊಟೀಸ್ ಜಾರಿ ಮಾಡಿದ್ದು, ವಿದೇಶಿ ಹೂಡಿಕೆ ಕಾನೂನು ಉಲ್ಲಂಘಿಸಿದ ನಿಮ್ಮ ಮೇಲೆ 1.35 ಬಿಲಿಯನ್ ದಂಡವನ್ನು ಯಾಕೆ ವಿಧಿಸಬಾರದು ಎಂದು ಪ್ರಶ್ನಿಸಿದೆ.

2009 ರಿಂದ 2015 ರವರೆಗಿನ ಅವಧಿಯಲ್ಲಿ   ವಿದೇಶಿ ಹೂಡಿಕೆಗಳನ್ನು ಸೆಳೆಯುವ ವೇಳೆ ಫ್ಲಿಪ್ ಕಾರ್ಟ್ ಫೇಮಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿದೆ. ಫ್ಲಿಪ್ ಕಾರ್ಟ್ ತನಗೆ ಹಾಗೂ ತನಗೆ ಸಂಬಂಧಿಸಿದ ಡಬ್ಲೂ ಎಸ್ ರಿಟೇಲ್ ವಿದೇಶ ಬಂಡವಾಳವನ್ನು ಸೆಳೆದುಕೊಂಡು ಬಳಿಕ ತನ್ನ ವೆಬ್ ಸೈಟ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇಡಿ ಹೇಳಿದೆ.

ಫ್ಲಿಪ್ ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್,  ಬಿನ್ನಿ ಬನ್ಸಾಲ್ ಹಾಗೂ ಇತರ 9 ಜನ ಹೂಡಿಕೆದಾರರ ಮೇಲೆ ಕ್ರಮಕೈಗೊಳ್ಳುವುದಾಗಿ ಇಡಿ ಹೇಳಿದೆ. ವಿದೇಶಿ ನೇರ ಹೂಡಿಕೆ ನಿಯಮವನ್ನು ಫ್ಲಿಪ್ ಕಾರ್ಟ್ ಪಾಲಿಸಿದೆ. ಇಡಿ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಸಹಕಾರ ನೀಡುತ್ತೇವೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ.

Comments are closed.