ಸೋಮವಾರ, ಏಪ್ರಿಲ್ 28, 2025
HomeBreakingKS Eshwarappa : ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ , ರಾಜೀನಾಮೆಯೊಂದಿಗೆ ಅಂತ್ಯವಾಗುತ್ತಾ ಈಶ್ವರಪ್ಪ ರಾಜಕೀಯ ಭವಿಷ್ಯ...

KS Eshwarappa : ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ , ರಾಜೀನಾಮೆಯೊಂದಿಗೆ ಅಂತ್ಯವಾಗುತ್ತಾ ಈಶ್ವರಪ್ಪ ರಾಜಕೀಯ ಭವಿಷ್ಯ ?

- Advertisement -

ಬೆಂಗಳೂರು : ಬಿಜೆಪಿಯ ಹಿರಿಯ ಸಚಿವರಾಗಿ, ಮಾಜಿ ಉಪಮುಖ್ಯಮಂತ್ರಿಗಳಾಗಿ ಹಿರಿಯ ಶಾಸಕರಾಗಿ ಹೀಗೆ ನಾನಾ ರೀತಿಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಉನ್ನತ ಸ್ಥಾನಗಳನ್ನು ಅನುಭವಿಸಿದ್ದ ಸಚಿವ ಈಶ್ವರಪ್ಪ(KS Eshwarappa) ಬಹುತೇಕ ಸಚಿವ ಸ್ಥಾನದಿಂದ ನಿರ್ಗಮಿಸೋದು ಖಚಿತವಾಗಿದೆ. ಇದರೊಂದಿಗೆ ಅಂದ್ರೇ ಈ ರಾಜೀನಾಮೆ ಯೊಂದಿಗೆ ಸಚಿವ ಈಶ್ವರಪ್ಪ ಸಕ್ರಿಯ ರಾಜಕಾರಣವೂ ಅಂತ್ಯಗೊಳ್ಳಲಿದೆ ಎಂದು ಅರ್ಥೈಸಲಾಗುತ್ತಿದೆ.

ಐದಕ್ಕೂ ಹೆಚ್ಚು ಭಾರಿ ಶಾಸಕರಾಗಿ, ಪಕ್ಷದ ಹಲವು ಜವಾಬ್ದಾರಿ, ಸಂಘಟನೆ ಹಾಗೂ ಅಧಿಕಾರ ಎಲ್ಲವನ್ನೂ ನಿಭಾಯಿಸಿದ ಅನುಭವಿಸಿದ ಈಶ್ವರಪ್ಪ ಸದಾಕಾಲ ತಮ್ಮ ನಾಲಿಗೆ ಯಿಂದಲೇ ವಿವಾದಗಳನ್ನು ಸೃಷ್ಟಿಸಿಕೊಂಡವರು. ಒಂದಿಲ್ಲೊಂದು ಕಾರಣಕ್ಕೆ ಸದಾ ಪಕ್ಷಕ್ಕೆ ಮುಜುಗರ ತರುತ್ತಿದ್ದ ಈಶ್ವರಪ್ಪನವರನ್ನು ಪಕ್ಷ ಹಿಂದುಳಿದ ಅಹಿಂದ ನಾಯಕ ಎಂಬ ಕಾರಣಕ್ಕೆ ಹಾಗೂ ಶಿವಮೊಗ್ಗ ಭಾಗದ ಜನನಾಯಕ ಎಂಬ ಚುನಾವಣೆ ಲೆಕ್ಕಾಚಾರಕ್ಕೆ ಸಹಿಸಿಕೊಂಡು ಮುನ್ನಡೆಸುತ್ತಲೇ ಬಂದಿತ್ತು. ಆದರೆ ಈಗ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಬಹುದಾದ ಮುಜುಗರ ತಪ್ಪಿಸಿಕೊಳ್ಳಲು ಹಾಗೂ ಪ್ರತಿಪಕ್ಷಗಳ ವಾಗ್ದಾಳಿ ತಪ್ಪಿಸಿಕೊಳ್ಳಲು ಈಶ್ವರಪ್ಪ ರಾಜೀನಾಮೆ ಬಿಜೆಪಿಗೆ ಅನಿವಾರ್ಯ ಎಂಬಂತಾಗಿದೆ. ಆದರೆ ಪಕ್ಷಕ್ಕೆ ಈಶ್ವರಪ್ಪ ರಾಜೀನಾಮೆ ಸಣ್ಣ ವಿಚಾರ ಎನ್ನಿಸಿದ್ದರೂ, ಈಶ್ವರಪ್ಪ ಪಾಲಿಗೆ ಇದು ರಾಜಕೀಯ ಭವಿಷ್ಯದ ಅಂತ್ಯ ಎಂದೇ ಬಣ್ಣಿಸಲಾಗುತ್ತಿದೆ.

ಈಗಾಗಲೇ 73 ವರ್ಷದ ಗಡಿ ದಾಟಿರುವ ಈಶ್ವರಪ್ಪನವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿಯಮಗಳ ಪ್ರಕಾರ ಟಿಕೇಟ್ ಸಿಗೋದೇ ಅನುಮಾನ ಎನ್ನಲಾಗಿತ್ತು. ಈಗ ಈ ರೀತಿಯಾಗಿ ಸಚಿವ‌ ಸಂಪುಟದಿಂದ ಹೊರಬಿದ್ದ ಮೇಲಂತೂ ಇನ್ನು ಸಕ್ರಿಯ ರಾಜಕಾರಣದಲ್ಲಿ ಈಶ್ವರಪ್ಪ ನವರನ್ನು ಬಿಜೆಪಿ ಉತ್ತೇಜಿಸುತ್ತದೇ ಎಂಬುದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಇನ್ನೊಂದೆಡೆ ಮುಂದಿನ ಭಾರಿ ತಮಗೆ ಟಿಕೇಟ್ ಸಿಗದೇ ಹೋದಲ್ಲಿ ಪುತ್ರ ಕಾಂತೇಶ್ ಗೆ ತಮ್ಮ ಕ್ಷೇತ್ರದಿಂದ ಟಿಕೇಟ್ ಪಡೆದು ವಂಶಪಾರಂಪರ್ಯ ರಾಜಕಾರಣ ಮುಂದುವರೆಸುವ ಲೆಕ್ಕಾಚಾರ ಹಾಕಿದ್ದ ಈಶ್ವರಪ್ಪನವರು ಈಗ ರಾಜೀನಾಮೆ‌ನೀಡೋ ಮೂಲಕ ಸಂಪುಟದಿಂದ ಹೊರ ಬರ್ತಿರೋದು ದೊಡ್ಡ ಅವಮಾನದ ಸಂಗತಿ.

ಹೀಗಾಗಿ ಇಂತಹದೊಂದು ದೊಡ್ಡ ಭ್ರಷ್ಟಾಚಾರದ ಆರೋಪದ‌ ಮೇಲೆ ಸಂಪುಟದಿಂದ ಹೊರಬಂದ ಮೇಲೆ ಮತ್ತೂ ಈ ಭ್ರಷ್ಟಾಚಾರದ ಆರೋಪದಲ್ಲಿ‌ ಈಶ್ವರಪ್ಪ ಪುತ್ರ ಕಾಂತೇಶ್ ಹೆಸರು ಕೂಡ ಕೇಳಿ ಬಂದಿರುವುದರಿಂದ ಮತ್ತೆ ಕಾಂತೇಶ್ ಗೂ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಸಿಗೋದು ಅನುಮಾನ. ಇನ್ನೊಂದೆಡೆ ಸಿಎಂ ಬೊಮ್ಮಾಯಿ ಅಧಿಕಾರದಲ್ಲಿ ಇದ್ದಾಗಲೇ, ನಿರಾಣಿ ಸಿಎಂ ಆಗ್ತಾರೇ ಎಂಬ ಹೇಳಿಕೆ ಸೇರಿದಂತೆ ಹಲವು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ ಈಶ್ವರಪ್ಪನವರಿಗೆ ಸಂಪುಟದಲ್ಲೂ ಅಂತಹ ಅಪ್ತರ್ಯಾರು ಉಳಿದಿಲ್ಲ. ಹೀಗಾಗಿ ಈಶ್ವರಪ್ಪ ರಾಜೀನಾಮೆ ಜೊತೆಗೆ ಅವರ ಬಹು ವರ್ಷದ ರಾಜಕಾರಣ ಅಂತ್ಯಗೊಂಡು ಈಶ್ವರಪ್ಪ ಮೂಲೆಗುಂಪಾಗೋದು ಸಹಜ ಅಂತ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ : ಸಂತೋಷ್‌ ಪಾಟೀಲ್‌ ಆತ್ಮಹತ್ಯೆ : ಸಚಿವ ಕೆ.ಎಸ್.‌ ಈಶ್ವರಪ್ಪ ವಿರುದ್ದ ಉಡುಪಿಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ : KS Eshwarappa : ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್​ ಈಶ್ವರಪ್ಪ

KS Eshwarappa political future culminating in his resignation from activist to deputy chief minister

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular