CBSE Class 10 12 : ಸಿಬಿಎಸ್​ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

CBSE Class 10 12 :ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಸಿಂಗಲ್ ಎಕ್ಸಾಂ ಮಾದರಿಯಲ್ಲಿಯೇ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಮಂಡಳಿಯು 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು 2 ಭಾಗಗಳಾಗಿ ವಿಂಗಡಿಸಿದೆ. ಸಿಬಿಎಸ್​​ಇ ಟರ್ಮ್ 1 ಪರೀಕ್ಷೆಗಳನ್ನು ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ನಡೆಸಲಾಗಿತ್ತು. ಸಿಬಿಎಸ್​​ಇ ಟರ್ಮ್​ 2 ಪರೀಕ್ಷೆಗಳು ಏಪ್ರಿಲ್​ 26ರಿಂದ ಜೂನ್​​ 15ರವರೆಗೆ ನಡೆಸಲಾಗುತ್ತದೆ.


ಮುಂದಿನ ಶೈಕ್ಷಣಿಕ ಅವಧಿಯಿಂದ 10ನೇ ತರಗತಿ ಹಾಗೂ 12ನೇ ತರಗತಿ ಬೋರ್ಡ್​ ಪರೀಕ್ಷೆಗಳನ್ನು ಒಂದೇ ಬಾರಿಗೆ ನಡೆಸಲಾಗುತ್ತದೆ. ಈ ಹಿಂದೆ ಕೂಡ ಇದೇ ರೀತಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಕೊರೊನಾ ಕಾರಣದಿಂದಾಗಿ 2 ಟರ್ಮ್​ಗಳ ರೂಪದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.


ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಟರ್ಮ್​ ಆಧಾರದಲ್ಲಿ ಅಥವಾ ವಾರ್ಷಿಕ ಪರೀಕ್ಷೆ ಇದರಲ್ಲಿ ಯಾವುದು ಇರಲಿದೆ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಧೃಢೀಕರಣ ನೀಡಿಲ್ಲ. ಇನ್ಮುಂದೆ ಟರ್ಮ್ ಮಾದರಿಯಲ್ಲಿಯೇ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್​​ಇ ಎಲ್ಲಿಯೂ ಘೋಷಣೆ ಮಾಡಿಲ್ಲ. ಈಗ ಶಾಲೆಗಳು ಪೂರ್ಣ ಸಾಮರ್ಥ್ಯದಲ್ಲಿ ನಡೆಯುತ್ತಿದೆ. ಹೀಗಾಗಿ ಮೊದಲ ಮಾದರಿಯಲ್ಲಿಯೇ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್​ಇ ಚಿಂತನೆ ನಡೆಸಿದೆ ಎನ್ನಲಾಗಿದೆ.


ಪಠ್ಯಕ್ರಮದ ತರ್ಕಬದ್ಧತೆಯ ಬಗ್ಗೆ ಮಾತನಾಡುತ್ತಾ, ಅಧಿಕಾರಿ ಹೇಳಿದರು: “ಎನ್‌ಸಿಇಆರ್‌ಟಿ ನಮಗೆ ತರ್ಕಬದ್ಧತೆಯ ವಿವರಗಳನ್ನು ಕಳುಹಿಸುತ್ತದೆ, ಅದರ ಆಧಾರದ ಮೇಲೆ ಪ್ರಕಟಣೆಯನ್ನು ಮಾಡಲಾಗುತ್ತದೆ. ಶಾಲೆಗಳು ಅಸ್ತಿತ್ವದಲ್ಲಿರುವ ಪುಸ್ತಕಗಳನ್ನು ಬಳಸಿಕೊಂಡು ಕಡಿಮೆ ಪಠ್ಯಕ್ರಮವನ್ನು ಕಲಿಸಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ :KS Eshwarappa : ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ , ರಾಜೀನಾಮೆಯೊಂದಿಗೆ ಅಂತ್ಯವಾಗುತ್ತಾ ಈಶ್ವರಪ್ಪ ರಾಜಕೀಯ ಭವಿಷ್ಯ ?

ಇದನ್ನೂ ಓದಿ : CBSE Term 2 Exams : ಸಿಬಿಎಸ್​ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ

BIG News For CBSE Class 10, 12 Board Students. Details Here

Comments are closed.