ಬೆಂಗಳೂರು : ರಾಜ್ಯ ಸರಕಾರ ಲಾಕ್ ಡೌನ್ ನಲ್ಲಿ ಸಿಲುಕಿರುವರು ಖಾಸಗಿ ವಾಹನಗಳಲ್ಲಿ ತಮ್ಮೂರುಗಳಿಗೆ ತೆರಳಲು ಅವಕಾಶ ಕಲ್ಪಿಸಿತ್ತು. ಆದ್ರೀಗ ಸರಕಾರ ಆದೇಶವನ್ನು ವಾಪಾಸ್ ಪಡೆದಿದೆ. ಅಲ್ಲದೇ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಮೇ 17ರ ವರೆಗೆ ಮೂರನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಕಾರ್ಮಿಕರು ಹಾಗೂ ಸಾಮಾನ್ಯರು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗಲು ಆಗದೇ ಹತಾಶರಾಗಿದ್ದಾರೆ.

ಮೇ 17ರವರೆಗೆ ಲಾಕ್ ಡೌನ್ ಮುಂದುವರಿಸಲು ನಿಶ್ಚಯಿಸಿರುವುದರಿಂದ ಎಲ್ಲರಿಗೂ ಅವವರ ಊರುಗಳಿಗೆ ಹೋಗಲು ಸರ್ಕಾರ ಅವಕಾಶ ಕಲ್ಪಿಸಿದೆ. ಮೂರು ದಿನಗಳ ಕಾಲ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ.

ಅಲ್ಲದೇ ರಾಜ್ಯ ಸರಕಾರ ಖಾಸಗಿ ವಾಹನಗಳಲ್ಲಿ ಮನೆಗಳಿಗೆ ತೆರಳಬಹುದು ಅನ್ನೋ ಆದೇಶವನ್ನು ರಾಜ್ಯ ಸರಕಾರ ವಾಪಾಸ್ ಪಡೆದಿದ್ದು, ಖಾಸಗಿ ವಾಹನಗಳ ಪ್ರಯಾಣಕ್ಕೆ ಪಾಸ್ ನೀಡದಂತೆ ಸರಕಾರ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.