ಕುಂದಾಪುರ : ಕರಾವಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕುಂದಾಪುರದಲ್ಲಿ ಮೂವರು ಬಸ್ ಚಾಲಕರಿಗೆ ಕೊರೊನಾ ಸೋಂಕು ದೃಢಟಪಟ್ಟಿದೆ. ಕುಂದಾಪುರದಿಂದ ಬೆಂಗಳೂರು, ಕುಂದಾಪುರದಿಂದ ಶಿವಮೊಗ್ಗ ಜಿಲ್ಲೆಗಳಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಚಾಲಕರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಜೂನ್ 30ರಂದು ಖಾಸಗಿ ಬಸ್ಸಿನ ಇಬ್ಬರು ಚಾಲಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕುಂದಾಪುರದ ಕೆಎಸ್ಆರ್ ಟಿಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. 44 ವರ್ಷದ ಚಾಲಕ ಕುಂದಾಪುರ -ಬೆಂಗಳೂರು, 36 ವರ್ಷದ ಚಾಲಕ ಕುಂದಾಪುರ – ಶಿವಮೊಗ್ಗ ಬಸ್ಸುಗಳಲ್ಲಿ ಚಾಲಕರಾಗಿದ್ರೆ, ಬಸ್ರೂರಿನ 58 ವರ್ಷದ ಚಾಲಕಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಈ ಪೈಕಿ ಇಬ್ಬರನ್ನು ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಿದ್ರೆ, ಬಾಗಲಕೋಟೆ ಮೂಲದ ಚಾಲಕರು ಬಾಗಲಕೋಟೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.