ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು, ಮೇ 18ರ ಬಳಿಕ ನಾಲ್ಕನೇ ಹಂತದ ಲಾಕ್ ಡೌನ್ ಜಾರಿ ಮಾಡುವುದು ಪಕ್ಕಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ರಾಜ್ಯಗಳ ಸಲಹೆಯನ್ನು ಆಧರಿಸಿ ಲಾಕ್ ಡೌನ್ ಆದೇಶವನ್ನು ಘೋಷಣೆ ಮಾಡಲಾಗುತ್ತದೆ. ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆಯನ್ನು ಪಡೆಯಲಾಗಿದೆ.

ಆದರೆ ಮೇ 18ರ ನಂತರ ಜಾರಿಯಾಗಲಿರುವ ಲಾಕ್ ಡೌನ್ ಸಂಪೂರ್ಣ ಹೊಸ ಸ್ವರೂಪದಲ್ಲಿರುತ್ತದೆ. ಲಾಕ್ ಡೌನ್ ಆದೇಶದ ಕುರಿತು ಮೇ 17ರ ಒಳಗಾಗಿ ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ..