ಮಡಿಕೇರಿ : ದುಬೈನಿಂದ ಮರಳಿದ್ದ ಕೊಡಗಿ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಯುವಕ ಬೆಂಗಳೂರಿನಿಂದ ಮಡಿಕೇರಿಗೆ ರಾಜಹಂಸ ಬಸ್ಸಿನಲ್ಲಿ ಸಂಚರಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಿ ಹುಡುಕಾಟ ಶುರುವಾಗಿದೆ. ಇನ್ನೊಂದೆಡೆ ಯುವಕ ನೆಲೆಸಿರೋ ಗ್ರಾಮಸ್ಥರ ಮೇಲೆಯೂ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದೆ.

ದುಬೈನಿಂದ ಬೆಂಗಳೂರಿಗೆ ಮರಳಿದ್ದ ಕೊಡಗಿನ 35 ವರ್ಷದ ಯುವಕ ಕೆಎಸ್ಆರ್ ಟಿಸಿಯ ರಾಜಹಂಸ ಬಸ್ಸಿನಲ್ಲಿ (ಕೆಎ19 ಎಫ್ 3179) ಮಡಿಕೇರಿಗೆ ಬಂದಿದ್ದ. ನಂತರ ತನ್ನೂರಾಗಿರೋ ಕೊಂಡಗೇರಿ ಗ್ರಾಮಕ್ಕೆ ತೆರಳಿದ ನಂತರದಲ್ಲಿ ಯುವಕನಿಗೆ ಜ್ವರ ಕಾಣಿಸಿಕೊಂಡಿದೆ. ಯುವಕದ ಆರೋಗ್ಯ ತಪಾಸಣೆಯ ನಂತರದಲ್ಲಿ ಯುವಕನಿಗೆ ಕೊರೊನಾ ಇರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಡಳಿತ ಯುವಕನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಯುವಕನ ಗ್ರಾಮದ 500 ಮೀಟರ್ ವ್ಯಾಪ್ತಿಯನ್ನು ಬಪರ್ ಝೋನ್ ಅಂತಾ ಘೋಷಣೆ ಮಾಡಿರೋ ಕೊಡಗು ಜಿಲ್ಲಾಡಳಿತ ಗ್ರಾಮಸ್ಥರಿಗೆ ನಿಷೇಧ ಹೇರಿದೆ. ಗ್ರಾಮಸ್ಥರು ಗ್ರಾಮವನ್ನು ಬಿಟ್ಟು ಎಲ್ಲಿಯೂ ತೆರಳದಂತೆ ಮುನ್ನೆಚ್ಚರಿಕೆಯನ್ನು ವಹಿಸಿದ್ದು, ಗ್ರಾಮದಲ್ಲಿ ನೆಲೆಸಿರೊ 306 ಮಂದಿಯ ಮೇಲೆಯೂ ನಿಗಾ ಇರಿಸಿದೆ. ಮಾರ್ಚ್ 31ರ ವರೆಗೂ ಗ್ರಾಮಸ್ಥರು ಗ್ರಾಮವನ್ನು ಬಿಟ್ಟು ಹೊರ ಹೋಗುವಂತಿಲ್ಲ. ಮದುವೆ, ಶುಭ ಸಮಾರಂಭಗಳಿಗೆ ಗ್ರಾಮಸ್ಥರಿಗೆ ನಿಷೇಧಿಸಲಾಗಿದೆ.

ಗ್ರಾಮಸ್ಥರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಒದಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಯುವಕ ಬೆಂಗಳೂರಿನಿಂದ ಮಡಿಕೇರಿಗೆ ತೆರಳಿದ್ದ ಬಸ್ಸಿನಲ್ಲಿ ಪ್ರಯಾಣಿಸಿದವರ ಬಗ್ಗೆಯೂ ಆತಂಕ ಎದುರಾಗಿದ್ದು, ಕೊರೊನಾ ಹರಡುವ ಭೀತಿ ಎದುರಾಗಿದ್ದು, ಬಸ್ಸಿನಲ್ಲಿ ಸಂಚರಿಸಿದವರು ಆಸ್ಪತ್ರೆಗೆ ತೆರಳಿ ಕೊರೊನಾ ಪರೀಕ್ಷೆಯನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.