ಭಕ್ತರಿಗಿಲ್ಲ ಬಾಲಾಜಿ ದರ್ಶನ : ತಿರುಪತಿ ದೇವಾಲಯ ಸಂಪೂರ್ಣ ಬಂದ್

0

ಹೈದ್ರಾಬಾದ್ : ಕೊರೊನಾ ವೈರಸ್ ಎಫೆಕ್ಟ್ ಇದೀಗ ಬಾಲಾಜಿಗೂ ತಟ್ಟಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶದ ಪವಿತ್ರ ಪುಣ್ಯಕ್ಷೇತ್ರವಾಗಿರೋ ತಿರುಮಲ ತಿರುಪತಿ ದೇವಸ್ಥಾನವನ್ನೇ ಬಂದ್ ಮಾಡಲಾಗಿದೆ. ಮಾರ್ಚ್ 31ರ ವರೆಗೂ ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಲಿದೆ.

ಕೊರೊನಾ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಬಾರೀ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭಕ್ತರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗಿತ್ತು. ಆದ್ರೆ ದೇವಸ್ಥಾನದಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಮೂಲದ ವೃದ್ದರೊಬ್ಬರು ಅಸ್ವಸ್ಥಗೊಂಡಿದ್ದರು.

ಈ ವೇಳೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಶಂಕಿತ ಕೊರೊನಾ ಇರೋದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಲಿ ದೇವಾಲಯದ ಬಾಗಿಲು ಬಂದ್ ಮಾಡಿದೆ.

ತಿರುಪತಿ ದೇವಸ್ಥಾನಕ್ಕೆ ಬಂದಿದ್ದ ಎಲ್ಲಾ ಭಕ್ತರನ್ನು ಕೆಳಗೆ ಕಳುಹಿಸಲಾಗಿದ್ದು, ವೃದ್ದರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ದೇವಸ್ಥಾನಕ್ಕೆ ಭಕ್ತರಷ್ಟೇ ಅಲ್ಲಾ, ದೇವಸ್ಥಾನದ ಸಿಬ್ಬಂಧಿಗಳಿಗೂ ತೆರಳೋದಕ್ಕೂ ಅವಕಾಶವನ್ನೇ ನೀಡುತ್ತಿಲ್ಲ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿದೆ.

Leave A Reply

Your email address will not be published.