ಮಡಿಕೇರಿ : ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರೊ ಘಟನೆ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ದುಬಾರೆಯಲ್ಲಿ ನಡೆದಿದೆ. ಶ್ರೇಯಸ್ (14 ವರ್ಷ), ಲೆನಿನ್ (15 ವರ್ಷ) ಮೃತ ದುರ್ದೈವಿಗಳು.

ಇಬ್ಬರೂ ಕೂಡ ಗೋಣಿಕೊಪ್ಪ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಶಾಲೆಯಿಂದ ಪಿಕ್ ನಿಕ್ ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಶಾಲಾ ವಿದ್ಯಾರ್ಥಿಗಳೆಲ್ಲರೂ ದುಬಾರೆ ಆನೆ ಕ್ಯಾಂಪ್ ಗೆ ಪ್ರವಾಸಕ್ಕೆ ತೆರಳಿದ್ದರು.

ದುಬಾರೆ ಆನೆ ಕ್ಯಾಂಪ್ ಗೆ ತೆರಳಿ ಹಿಂದಿರುಗುವ ವೇಳೆಯಲ್ಲಿ ನದಿಯಲ್ಲಿನ ಆಳ ಅರಿಯದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಸಿದ್ದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.