ಹೇರ್ ಕ್ರೀಂ ಬಳಸಿದ್ರೂ ಬೆಳೆಯಲಿಲ್ಲ ಕೂದಲು…! ಜಾಹೀರಾತು ರೂಪದರ್ಶಿಗೆ ಬಿತ್ತು ದಂಡ….!!

ನಟ-ನಟಿಯರೇ ದುಡ್ಡು ಕೊಡ್ತಾರೆ ಅಂತ ಸಿಕ್ಕ ಸಿಕ್ಕ ಪ್ರೊಡಕ್ಟ್ ಗೆ ಜಾಹೀರಾತು ನೀಡುವ ಮುನ್ನ ಈ ಸ್ಟೋರಿ ಓದೋಕೆ ಮರಿಬೇಡಿ.

ಆ ನಟ ದುಡ್ಡಿನಾಸೆಗೆ ಈ ಕ್ರೀಂ ಬಳಸಿ ತಲೆಮೇಲೆ ಕೂದಲು ಹೇರಳವಾಗಿ ಬೆಳೆಯುತ್ತೇ ಅಂತ ಜಾಹೀರಾತು ನೀಡಿದ್ದ. ಆದರೇ ಪ್ರೊಡಕ್ಟ್ ಖರೀದಿಸಿದ ಗ್ರಾಹಕನ ತಲೆ ಮೇಲೆ ಕೂದಲು ಬೆಳೆಯಲಿಲ್ಲ. ಹೀಗಾಗಿ ಜಾಹೀರಾತು ನೀಡಿದ್ದಕ್ಕೆ 10 ಸಾವಿರ ದಂಡ ಕಟ್ಟೋ ಸ್ಥಿತಿ ನಟನದ್ದು.

ತಿರುವನಂತಪುರಂನ ಧಾತ್ರಿ ಹೇರ್ ಕ್ರೀಂ ತಯಾರಿಕಾ ಸಂಸ್ಥೆ ಹಾಗೂ ಮಲೆಯಾಳಂ ನಟ ಅನೂಪ್ ಮೆನನ್ ಇಂತಹದೊಂದು ಸಂಕಷ್ಟಕ್ಕೆ ಸಿಲುಕಿದ್ದು ಸುಳ್ಳು ಭರವಸೆ ನೀಡಿದ ಕಾರಣಕ್ಕೆ ಇಬ್ಬರಿಗೂ ನ್ಯಾಯಾಲಯ ದಂಡ ವಿಧಿಸಿದೆ.

ಕೇರಳ ತ್ರಿಶೂರ್ ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ ಕ್ರೀಂ ತಯಾರಿಕಾ ಸಂಸ್ಥೆ ಹಾಗೂ ಅನೂಪ್ ಮೆನನ್ ಗೆ ತಲಾ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಫ್ರಾನ್ಸಿಸ್ ವಡಕ್ಕನ್ ಎಂಬ ಗ್ರಾಹಕರು ಅನೂಪ್ ಮೆನನ್ ನೀಡಿದ ಜಾಹೀರಾತು ನೋಡಿ ಧಾತ್ರಿ ಹೇರ್ ಕ್ರೀಂ‌ ಖರೀದಿಸಿದ್ದರು. ಐದು ವಾರದಲ್ಲಿ ಕೂದಲು ಬೆಳೆಯುತ್ತೆ ಎಂದು ಜಾಹಿರಾತು ನೀಡಲಾಗಿತ್ತು.

ಫ್ರಾನ್ಸಿಸ್ ವಡಕ್ಕನ್ ಕೂದಲು ಬೆಳೆಯಲಿಲ್ಲ. ಇದರಿಂದ ಫ್ರಾನ್ಸಿಸ್ ಕುಟುಂಬಸ್ಥರು ಹಾಗೂ ಸ್ನೇಹಿತರ ಎದುರು ನಗೆಪಾಟಲಿಗೀಡಾಗಿದ್ದ. ಹೀಗಾಗಿ ನೊಂದ ಫ್ರಾನ್ಸಿಸ್, ಗ್ರಾಹಕರ ವೇದಿಕೆ ಮೊರೆ ಹೋಗಿದ್ದ.

ದೂರುದಾರ ಫ್ರಾನ್ಸಿಸ್ ಪರ ವಾದ ಮಂಡಿಸಿದ್ದ ವಕೀಲ, ಎ.ಡಿ.ಬೆನ್ನಿ ತಮ್ಮ ಕಕ್ಷಿದಾರನಿಗೆ ಐದು ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು.ನ್ಯಾಯಾಲಯ ದಂಡ ವಿಧಿಸಿದ ಬಳಿಕ ಮಾತನಾಡಿದ ನಟ ಅನೂಪ್ ಮೆನನ್, ಈ ಕ್ರೀಂ ಹೇರ್ ನರಿಶ್ ಮೆಂಟ್ ಗೆ ಸಿದ್ದಪಡಿಸಿದ್ದು ಎಂದು ನಾನು ಭಾವಿಸಿ ಜಾಹೀರಾತಿನಲ್ಲಿ ಭಾಗವಹಿಸಿದ್ದೇ, ನಾನೆಂದೂ ಇದನ್ನು ಬಳಸಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

Comments are closed.