ಅಂಚನ್ ಗೀತಾ
ಈಗ ಎತ್ತ ಕಣ್ಣಾಡಿಸಿದ್ರು ಹಣ್ಣುಗಳ ರಾಜ ಮಾವಿನ ಹಣ್ಣಿನದ್ದೆ ಕಾರು ಬಾರು. ಈ ಹಣ್ಣು ಎಷ್ಟು ಸಿಹಿಯೋ ಅಷ್ಟೇ ಪೋಷಕಾಂಶಗಳನ್ನು ಹೊಂದಿದೆ. ಆದರೆ ಸಕ್ಕರೆಯ ಪ್ರಮಾಣ ಕೊಂಚ ಹೆಚ್ಚಾಗಿರುವ ಕಾರಣ ಅತೀಯಾಗಿ ಸೇವಿಸಬಾರದು.

ಮಾವಿನ ಹಣ್ಣಿನಲ್ಲಿ ಕ್ವೆರ್ಸೆಟಿನ್, ಫಿಸೆಟಿನ್, ಐಸೋಕ್ವೆರ್ಸಿಟ್ರಿನ್ , ಗ್ಯಾಲಿಕ್ ಆಸಿಡ್ ನಂತಹ ನಿರೋಧಕ ಗುಣವಿರುವ ಪೋಷಕಾಂಶ ಗಳಿದೆ. ಈ ಎಲ್ಲಾ ಗುಣ ಲಕ್ಷಣಗಳು ನಮ್ಮ ದೇಹವನ್ನು ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ವಿರುದ್ದ ರಕ್ಷಣೆ ನೀಡುತ್ತೆ.

ಮಾವಿನಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಕರಗುವ ನಾರು ಮತ್ತು ಪೆಕ್ಟಿನ್ ಇದ್ದು ಇವೆಲ್ಲವೂ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಆರೋಗ್ಯಕರ ಮಿತಿಗಳಲ್ಲಿ ಇರುವಂತೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

ತ್ವಚೆಯ ಶುದ್ದೀಕರಣಕ್ಕೂ ಇದು ಸಹಾಕಾರಿ. ಮಾವಿನ ಹಣ್ಣನ್ನು ತಿನ್ನೋದ್ರಿಂದ ಅದು ನಿಮ್ಮ ಚರ್ಮದ ಆಳದಿಂದ ಚರ್ಮವನ್ನು ಶುದ್ದಗೊಳಿಸುತ್ತದೆ. ಅಷ್ಟೆ ಅಲ್ಲದೆ ಕಡಲೆಹಿಟ್ಟು, ಜೇನುತುಪ್ಪ, ಎರಡು ಸ್ಪೂನ್ ಮಾವಿನ ಹಣ್ಣು ಮಿಕ್ಸ ಮಾಡಿ ಮುಖಕ್ಕೆ ಹಚ್ಚಿಕೊಂಡು ತಣ್ಣನೆಯ ನೀರಿನಲ್ಲಿ ಮುಖ ತೊಳೆದರೆ ತ್ವಚೆಯ ಅಂದ ಹಿಮ್ಮಡಿಗೊಳ್ಳುತ್ತದೆ.

ತೂಕವನ್ನು ಇಳಿಸಿಕೊಳ್ಳಲು ಕೂಡ ಮಾವಿನ ಹಣ್ಣು ಬಹಳ ಪ್ರಯೋಜನಕಾರಿ. ಅಲ್ಲದೇ ಮಾವಿನ ಹಣ್ಣು ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದು ಇದು ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸುತ್ತದೆ.

ಮಾವಿನ ಹಣ್ಷಿನ ನಲ್ಲಿ ವಿಟಮಿನ್ ಎ ಸಹಾ ಉತ್ತಮ ಪ್ರಮಾಣ ದಲ್ಲಿದ್ದು ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನೆರವಾಗುವ ಪರಿಪೂರ್ಣ ಹಣ್ಣಾಗಿದೆ. ಇಷ್ಟೆಲ್ಲಾ ಸಮೃದ್ದ ಗುಣ ಹೊಂದಿರೋ ಮಾವಿನ ಹಣ್ಣು ಸೇವಿಸೊದನ್ನ ಮರೀಬೇಡಿ.