ಬೆಂಗಳೂರು : ಕೊರೊನಾ ಮಹಾಮಾರಿಯ ವಿರುದ್ದ ವೈದ್ಯಕೀಯ ಸಿಬ್ಬಂಧಿಗಳು ಹೋರಾಟ ನಡೆಸುತ್ತಿದ್ದಾರೆ. ಕೋವಿಡ್ -19 ಸೋಂಕು ಹರಡದಂತೆ ತಡೆಯವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂಧಿಗಳಿಗೆ ಮಾಸ್ಕ್, ಗ್ಲೋವ್ಸ್ ಹಾಗೂ ಸ್ಯಾನಿಟೈಸರ್ ಮತ್ತು ಪಿಪಿಇ ಕಿಟ್ ಗಳನ್ನು ಒದಗಿಸುವಂತೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯದಲ್ಲಿ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ ಬೇಡಿಕೆ ಎಷ್ಟಿದೆ. ಇದನ್ನೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಕುರಿತು ನ್ಯಾಯಾಲಯಕ್ಕೆ ವಿವರಗಳನ್ನು ನೀಡುವಂತೆ ಆದೇಶಿಸಿದ್ದರು.

ಈ ಕುರಿತು ಸರಕಾರ 2.40 ಲಕ್ಷ ಎನ್-95 ಮಾಸ್ಕ್, 6.94 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 53 ಸಾವಿರ ಪಿಪಿಇ ಕಿಟ್‌ಗಳು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಲ್ಲಿ ಸ್ಟಾಕ್ ಇದೆ. 324 ವೆಂಟಿಲೇಟರ್, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 10 ಲಕ್ಷ ಪಿಪಿಇ ಕಿಟ್ಸ್, 25 ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್‌ಗಳ ಖರೀದಿಗೆ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಸರಕಾರ ನ್ಯಾಯಾಲಯಕ್ಕೆ ವಿವರಣೆ ನೀಡಿತ್ತು.

ಆದರೆ ಕಲಬುರಗಿ, ಬೀದರ್ ಜಿಲ್ಲೆಗಳ ಆಸ್ಪತ್ರೆಯ ಸಿಬ್ಬಂಧಿ ಹಾಗೂ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುವ ಆಶಾ ಮತ್ತು ಆರೋಗ್ಯ ಸಹಾಯಕಿಯರು ಕೂಡ ಮೇಲ್ ಮಾಡಿ ಸರಕಾರ ನಮಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ಒದಗಿಸಿಲ್ಲ ಅಂತಾ ನ್ಯಾಯಾಲಯಕ್ಕೆ ಈ ಮೇಲ್ ಮೂಲಕ ತಿಳಿಸಿದ್ದಾರೆ.