ಸಿಎಂ ಯಡಿಯೂರಪ್ಪಗೆ ಸಲಹೆ ಕೊಟ್ಟ ಉಪ್ಪಿ : ಲಾಕ್ ಡೌನ್ ಬಗ್ಗೆ ಹೀಗೆ ಹೇಳಿದ್ದೇಕೆ ಸೂಪರ್ ಸ್ಟಾರ್

0

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸರಕಾರದ ಲಾಕ್ ಡೌನ್ ಆದೇಶದ ಬಗ್ಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ರೂ ಜನರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿಲ್ಲ, ಸಿಎಂ ಯಡಿಯೂರಪ್ಪ ಕೂಡ ಲಾಕ್ ಡೌನ್ ಪಾಲಿಸಿಲ್ಲ. ಹೀಗಾಗಿ ಪ್ರಜಾಕೀಯದ ಸಂಸ್ಥಾಪಕ ಉಪ್ಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 2 ಸಲಹೆಗಳನ್ನು ನೀಡಿದ್ದಾರೆ.

  1. ಲಾಕ್ ಡೌನ್ ಜಾರಿ ಮಾಡೋದಾದ್ರೆ ಶೇ.100 ರಷ್ಟು ಲಾಕ್ ಡೌನ್ ಮಾಡಿ. ಸಂಪೂರ್ಣವಾಗಿ ಸರಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯನ್ನಾಗಿ ಬಳಸಿಕೊಳ್ಳಿ. ಜನರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳನ್ನು ನೀವೇ ಮನೆ ಮನೆಗೆ ತಲುಪಿಸಿ. ಒಂದೊಮ್ಮೆ ಹಾಲು, ತರಕಾರಿ, ಧಾನ್ಯಗಳನ್ನು ಕೊಳ್ಳಲು ಅವಕಾಶ ಕೊಟ್ಟರೆ ಜನರ ಗುಂಪು ಸೇರುತ್ತಾರೆ. ಮಾತ್ರವಲ್ಲ ಬೇಕರಿ, ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ಕೊಳ್ಳಲು ಬಿಟ್ಟರೂ ಕೂಡ ಲಾಕ್ ಡೌನ್ ನಿಯಮ ಪಾಲನೆ ಆಗೋದಿಲ್ಲ ಎಂದಿದ್ದಾರೆ.

  1. 2.ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ ಡೌನ್ ತೆರೆಯಿತಿ. ಜನರೇ ಜವಾಬ್ದಾರಿಯನ್ನು ತೆಗೆದುಕೊಂಡು ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು,. ಜನರು ಎಷ್ಟೇ ಮೂರ್ಖರು ( ಹೀಗೆ ಮಾಡಿಬಿಟ್ಟಿದ್ದಾರೆ ಜನನಾಯಕರು) ಅಂದುಕೊಂಡರು ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೆ ಕೊಡುತ್ತಾರೆಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
    ಸರಕಾರವೇ ಲಾಕ್ ಡೌನ್ ಆದೇಶ ಜಾರಿ ಮಾಡಿ ಜನರನ್ನು ಹಾಲುಮ ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ ?

ಇಷ್ಟೆಲ್ಲಾ ಲಾಕ್ ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್ ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತಾ ಹೇಳುವವರಿಗೆ ( ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ. ಮಲಗಿದ್ರೆ-ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ…
ಹೀಗಂತಾ ಉಪ್ಪಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಯಾವಾಗ ಲಾಕ್ ಡೌನ್ ಮುಗಿಯುತ್ತೆ ಅಂತಾ ಪ್ರಶ್ನಿಸಿದ್ದ ಉಪ್ಪಿ ಇದೀಗ ಲಾಕ್ ಡೌನ್ ಆದೇಶ ಪಾಲನೆಯಾಗದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಟ್ವೀಟ್ ನ್ನು ಮುಖ್ಯಮಂತ್ರಿಗಳ ಪೇಜ್ ಗೆ ಕೂಡ ಟ್ಯಾಗ್ ಮಾಡಿದ್ದಾರೆ.

Leave A Reply

Your email address will not be published.