ಸಾಮೂಹಿಕ ರಜೆ ಹಾಕಿ ಪ್ರೊಟೆಸ್ಟ್ : ಬೇಡಿಕೆ ಈಡೇರಿಸಿಕೊಳ್ಳಲು ಬಿಬಿಎಂಪಿ ನೌಕರರ ಪ್ಲ್ಯಾನ್

ಬೆಂಗಳೂರು : ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಸರ್ಕಾರಕ್ಕೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಪ್ರೊಟೆಸ್ಟ್ ಆತಂಕ ಕಾಡಲಾರಂಭಿಸಿದೆ. ಮೊನ್ನೆ ಮೊನ್ನೆ ಅಂಗನವಾಡಿ ತಾಯಂದಿರು ಮುಷ್ಕರಕ್ಕಿಳಿದು ಬೇಡಿಕೆ ಈಡೇರಿಸಿಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಈಗ ಇವರೆಲ್ಲರ ಜೊತೆ ಗುರುವಾರ ಪಾಲಿಕೆ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದು (Mass leave protest BBMP) ಇಂದು ಸಾಮೂಹಿಕ ರಜೆ ಹಾಕಲಿದ್ದಾರೆ.

ಹೌದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಬಿಬಿಎಂಪಿ ನೌಕರರು ಹಾಗೂ ಅಧಿಕಾರಿಗಳು ಸಾಮೂಹಿಕ ರಜೆ ಹಾಕಲಿದ್ದಾರೆ. ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಸಿಎಂಗೆ ಹಾಗೂ ಬಿಬಿಎಂಪಿ ಅಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗದೇ ಇರುವುದರ ಹಿನ್ನೆಲೆ ಇಂದು ಬೆಂಗಳೂರಿನ 198 ವಾರ್ಡ್ ನಲ್ಲಿ ಕಾರ್ಯನಿರ್ವಹಿಸ್ತಿರೋ ಪಾಲಿಕೆ ಸಿಬ್ಬಂದಿಗಳು ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸ್ತಿರೋ ಕಂದಾಯ, ಅರೋಗ್ಯ, ಶಿಕ್ಷಣ, ಮಾರುಕಟ್ಟೆ, ಯೋಜನೆ, ಆಡಳಿತ ವಿಭಾಗದ ಅಧಿಕಾರಿಗಳು ಸೇರಿದಂತೆ ಸುಮಾರು 7 ಸಾವಿರ ನೌಕರರು ಹಾಗೂ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರಲಿದ್ದಾರೆ.

Mass leave protest BBMP : ಬಿಬಿಎಂಪಿ ಬೇಡಿಕೆಗಳೇನು ?

• ನಿಯಮಾವಳಿಯಂತೆ ಸಕಾಲದಲ್ಲಿ ಅಧಿಕಾರಿ, ನೌಕರರಿಗೆ ಸೌಲಭ್ಯ ಒದಗಿಸಬೇಕು
• ಪಾಲಿಕೆಯಲ್ಲಿ ವಿಲೀನಗೊಂಡಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು
• ಆರೋಗ್ಯ ಕಾರ್ಡ್ ನೀಡುವುದಾಗಿ ಹೇಳಿ ಇದುವರೆಗೆ ನೀಡಿಲ್ಲ
• ಹೀಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ
• ಅನಾರೋಗ್ಯಕ್ಕೆ ಒಳಗಾದಾಗ ಬಿಬಿಎಂಪಿ ಆಸ್ಪತ್ರೆಗಳು ಮಾತ್ರವಲ್ಲದೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು
• ಖಾಲಿ ಇರುವ ಎಲ್ಲಾ ಹುದ್ದೆಗೆ ನೇಮಕಾತಿ ಮಾಡಬೇಕು
• ಕೆಂಪೇಗೌಡ ಜಯಂತಿ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು.

ಒಟ್ಟಾರೆ ಇಂದು ಬಿಬಿಎಂಪಿಯ ಎಲ್ಲಾ ಇಲಾಖೆಯ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಈ ಮೂಲಕ ಸಾರ್ವಜನಿಕ ತೊಂದರೆ ಆಗಲಿದೆ. ಈ ಬಗ್ಗೆ ಸರ್ಕಾರ ಪಾಲಿಕೆ ನೌಕರರ ಬೇಡಿಕೆ ಗಳನ್ನು ಆಲಿಸಿ ಸೂಕ್ತ ಪರಿಹಾರ ಕೊಡದೆ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಸರ್ಕಾರ ಹಾಗೂ ಬಿಬಿಎಂಪಿ ತಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಬಿಬಿಎಂಪಿ ನೌಕರರು ಹೋರಾಟವನ್ನು ತೀವ್ರಗೊಳಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನವಾಗಿ ಪ್ರೊಟೆಸ್ಟ್ ಮಾಡಲು ಸಿದ್ಧವಾಗುತ್ತಿದ್ದಾರೆ.

ಇದನ್ನೂ ಓದಿ : Bengaluru Airport Closed : ಬೆಂಗಳೂರು ವಿಮಾನ ನಿಲ್ದಾಣ 10 ದಿನಗಳ ಕಾಲ ಬಂದ್

ಇದನ್ನೂ ಓದಿ : BMTC Electric bus : ವೋಲ್ವೋ ಬಿಟ್ಟು ಎಲೆಕ್ಟ್ರಿಕಲ್ ಬಸ್: ನಷ್ಟ ಸರಿತೂಗಿಸಲು ಬಿಎಂಟಿಸಿ ಪ್ಲ್ಯಾನ್

Mass leave protest BBMP employees plan to meet demand

Comments are closed.