ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಅಗ್ನಿ ಅವಘಡ (Fire Breaks) ಸಂಭವಿಸಿದೆ. ವೀರಭದ್ರ ನಗರದಲ್ಲಿ ಈ ದುರಂತ ಸಂಭವಿಸಿದ್ದು, 30 ಕ್ಕೂ ಅಧಿಕ ಬಸ್ಸುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಬಾರೀ ದುರಂತ ಸಂಭವಿಸಿತ್ತು. ಈ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅಗ್ನಿದುರಂತ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರು ನಗರದ (Bengaluru City) ಹೊಸಕೆರೆಹಳ್ಳಿಯ ವೀರಭದ್ರನಗರದ ಪಾರ್ಕಿಂಗ್ ಲಾಟ್‌ನಲ್ಲಿ ಈ ದುರಂತ ಸಂಭವಿಸಿದೆ.
ಪಾರ್ಕಿಂಗ್‌ನಲ್ಲಿ ಸುಮಾರು 30 ಕ್ಕೂ ಅಧಿಕ ಬಸ್ಸುಗಳನ್ನು ನಿಲ್ಲಿಸಲಾಗಿತ್ತು. ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೊಂದೆ ಬಸ್ಸುಗಳಿಗೆ ವ್ಯಾಪಿಸುತ್ತಾ ಸಾಗಿದ ಬೆಂಕಿ ನಿಲ್ಲಿಸಿದ್ದ ಬಹುತೇಕ ಬಸ್ಸುಗಳನ್ನು ಸುಟ್ಟು ಕರಕಲಾಗುವಂತೆ ಮಾಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ 3 ದಿನ ವಿದ್ಯುತ್ ಕಡಿತ : ಯಾವ ಪ್ರದೇಶಗಳಲ್ಲಿ, ಯಾವ ದಿನ ಪವರ್ ಕಟ್, ಇಲ್ಲಿದೆ ಸಂಪೂರ್ಣ ಮಾಹಿತಿ

ಘಟನೆ ನಡೆದ ವೀರಭದ್ರ ನಗರದ ಸ್ಥಳಕ್ಕೆ ಡಿಸಿಪಿ ರಾಹುಲ್ ಕುಮಾರ್ ಅವರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಶ್ರೀನಿವಾಸ್ ಎಂಬವರಿಗೆ ಸೇರಿದ ಕೋಚ್‌ವರ್ಕ್ಸ್ ಇದಾಗಿದ್ದು, ಈ ಭಾಗದಲ್ಲಿ 15ವರ್ಷಗಳಿಂದಲೂ ಕೆಲಸಗಳು ನಡೆಯುತ್ತಿತ್ತು. ಗ್ಯಾರೇಜ್‌ನಲ್ಲಿ ಸುಮಾರು 42 ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಬಸ್ಸಿನ ಎಮರ್ಜೆನ್ಸಿ ಬಾಗಿಲಿನ ಕೆಲಸ ನಡೆಯುತ್ತಿದ್ದು, ಈ ವೇಳೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಹವಾನಿಯಂತ್ರಿತ ಬಸ್ಸುಗಳೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಸದ್ಯ 30 ಬಸ್ಸುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ 5 ಬಸ್ಸುಗಳನ್ನು ಸದ್ಯ ಹೊರಗೆ ತರಲಾಗಿದೆ.
ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಯಾವ ಕಾರಣಕ್ಕೆ ಘಟನೆ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ. ಎಮರ್ಜೆನ್ಸಿ ಬಾಗಿಲಿನ ದುರಸ್ಥಿ ವೇಳೆಯಲ್ಲಿ ವೇಲ್ಡಿಂಗ್ ನಿಂದ ಬೆಂಕಿ ಸಿಡಿದೆಯಾ ? ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ ನಡೆದಿದ್ಯಾ ಅನ್ನೋ ಖಚಿತವಾಗಿದೆ. ಇಲ್ಲಾ ಯಾರಾದ್ರೂ ಬೆಂಕಿ ಹಚ್ಚಿದ್ರಾ ಅನ್ನೋದು ತಿಳಿದು ಬಂದಿಲ್ಲ.
ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಜೊತೆಗೆ ಗ್ಯಾರೇಜ್ ಮಾಲೀಕರು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಬಸ್ ಅಗ್ನಿ ದುರಂತದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಇದನ್ನೂ ಓದಿ : ಆದಾಯಕ್ಕಾಗಿ ಜಾಹೀರಾತಿಗೆ ಮಣೆಹಾಕಿದ ಬಿಬಿಎಂಪಿ : ಹೈಕೋರ್ಟ್ ಆದೇಶಕ್ಕಿಲ್ಲ ಬೆಲೆ
ಇದೇ ಜಾಗದಲ್ಲಿ 2015 ರಲ್ಲಿ ಅಗ್ನಿಅವಘಡ ಸಂಭವಿಸಿತ್ತು. ತಮಿಳುನಾಡಿನ ಬಸ್ಸುಗಳೆಂಬ ಕಾರಣಕ್ಕೆ ಕಾವೇರಿ ಗಲಾಟೆಯ ಸಂದರ್ಭದಲ್ಲಿ ಸುಮಾರು 25 ಬಸ್ಸುಗಳನ್ನು ಸುಟ್ಟು ಹಾಕಲಾಗಿತ್ತು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಅಗ್ನಿದುರಂತ ಸಂಭವಿಸಿದ್ದು, ಪೊಲೀಸರು ಘಟನೆಗೆ ಕಾರಣವನ್ನು ಹುಡುಕುತ್ತಿದ್ದಾರೆ.
ಇನ್ನು ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿಗೆ ಸ್ಪೋಟಗೊಂಡು ಬಾರೀ ದುರಂತ ಸಂಭವಿಸಿದ್ದು, ದುರಂತದಲ್ಲಿ ಹಲವು ಸಾವನ್ನಪ್ಪಿದ್ರೆ, ಇನ್ನೂ ಕೆಲವರು ಗಾಯಗೊಂಡು ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ದುರಂತ ಸಂಭವಿಸಿದೆ.