ಬೆಂಗಳೂರಿನಲ್ಲಿ 3 ದಿನ ವಿದ್ಯುತ್‌ ಕಡಿತ : ಯಾವ ಪ್ರದೇಶಗಳಲ್ಲಿ, ಯಾವ ದಿನ ಪವರ್‌ ಕಟ್‌, ಇಲ್ಲಿದೆ ಸಂಪೂರ್ಣ ಮಾಹಿತಿ

ಅಕ್ಟೋಬರ್ 24 ರಿಂದ ಅಕ್ಟೋಬರ್ 27ರ ವರೆಗೆ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ವಿದ್ಯುತ್‌ ಸರಬರಾಜು ಕಂಪೆನಿಗಳು ವಿದ್ಯುತ್‌ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪವರ್‌ ಕಟ್‌ (Bangalore Power Cut ) ಉಂಟಾಗಲಿದೆ.

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮತ್ತೆ ವಿದ್ಯುತ್‌ ಕಡಿತ ಉಂಟಾಗಲಿದೆ. ಇಂದಿನಿಂದ ಬೆಂಗಳೂರಿನ ಹಲವೆಡೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅಕ್ಟೋಬರ್ 24 ರಿಂದ ಅಕ್ಟೋಬರ್ 27ರ ವರೆಗೆ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ವಿದ್ಯುತ್‌ ಸರಬರಾಜು ಕಂಪೆನಿಗಳು ವಿದ್ಯುತ್‌ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪವರ್‌ ಕಟ್‌ (Bangalore Power Cut ) ಉಂಟಾಗಲಿದೆ.

ಒಂದೆಡೆ ವಿದ್ಯುತ್‌ ಕಡಿತದ ನಡುವಲ್ಲೇ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ವೇಳೆಯಲ್ಲಿ ವಿದ್ಯುತ್‌ ಸರಬರಾಜಿನ ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್‌ ನಿರ್ವಹಣೆ, ಓವರ್‌ ಹೆಡ್‌ನಿಂದ ಅಂಡರ್‌ಗ್ರೌಂಡ ಕಾಮಗಾರಿ ಬದಲಾವಣೆ. ರಿಂಗ್‌ ಮುಖ್ಯ ಘಟಕ ನಿರ್ವಹಣೆ. ಮರ ಕತ್ತರಿಸುವ ಕಾಮಗಾರಿ, ನೀರು ಸರಬರಾಜ ಕಾಮಗಾರಿಗಳು ನಡೆಯಲಿವೆ.

3 days power cut in Bengaluru In which areas power cut, here is the complete information
Image Credit to Original Source

ಇಂದಿನಿಂದ ನಾಲ್ಕು ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾದ್ರೆ ನಾಲ್ಕು ದಿನಗಳ ಕಾಲ ಯಾವ ದಿನದಂದು ಯಾವ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಆದಾಯಕ್ಕಾಗಿ ಜಾಹೀರಾತಿಗೆ ಮಣೆಹಾಕಿದ ಬಿಬಿಎಂಪಿ : ಹೈಕೋರ್ಟ್ ಆದೇಶಕ್ಕಿಲ್ಲ ಬೆಲೆ

ಬೆಂಗಳೂರಿನಲ್ಲಿ ವಿದ್ಯುತ್‌ ಕಡಿತದ ಪ್ರದೇಶಗಳ ಪಟ್ಟಿ ಇಲ್ಲಿದೆ :

ಅಕ್ಟೋಬರ್ 24-27( ಸೋಮವಾರದಿಂದ ಶುಕ್ರವಾರದವರೆಗೆ) : ಕುಂಟೇಗೌಡನಹಳ್ಳಿ, ಯಲದಬಾಗಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯನಪಾಳ್ಯ, ಎಲ್.ಎಚ್.ಪಾಳ್ಯ, ತಿಪ್ಪನಹಳ್ಳಿ, ದೊಡ್ಡರಸಹಳ್ಳಿ, ದೊಡ್ಡರಸಹಳ್ಳಿ, ದಡ್ಡರಸಹಳ್ಳಿ, ದಡ್ಡರಸಹಳ್ಳಿ, ದಡ್ಡರಸಹಳ್ಳಿ ತಿಹಳ್ಳಿ.

3 days power cut in Bengaluru In which areas power cut, here is the complete information
Image Credit to Original Source

ಅಕ್ಟೋಬರ್ 25-27 (ಬುಧವಾರದಿಂದ ಶುಕ್ರವಾರದವರೆಗೆ): ಚಂದ್ರಲೇಔಟ್ 80 ಅಡಿ ರಸ್ತೆ, 1ನೇ ಮತ್ತು 2ನೇ ಹಂತ, ಪಾಲಿಕೆ ಸೌಧ, ಜ್ಯೋತಿನಗರ, ಆದಾಯ ತೆರಿಗೆ ಲೇಔಟ್, ಬಸವೇಶ್ವರ ಬಡಾವಣೆ. ಅಕ್ಟೋಬರ್ 26, ಗುರುವಾರ: ಎಸ್ಎಸ್ ಹೈಟೆಕ್ ಆಸ್ಪತ್ರೆ ಮತ್ತು ಅದರ ಸುತ್ತಮುತ್ತ.

ಇದನ್ನೂ ಓದಿ : ಮಕರರ ಜ್ಯೋತಿ, ಮಂಡಲ ಪೂಜೆಗೆ ಹೊಸರೂಲ್ಸ್‌ : ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಕೇರಳ ಹೈಕೋರ್ಟ್‌ ಆದೇಶ

ವಿಜಯದಶಮಿಯ ದಿನದಿಂದಲೇ ವಿದ್ಯುತ್‌ ಸರಬರಾಜು ಕಂಪೆನಿಗಳು ಸಿಲಿಕಾನ್‌ ಸಿಟಿಯಲ್ಲಿ ವಿದ್ಯುತ್‌ ಕಾಮಗಾರಿಯನ್ನು ಕೈಗೆತ್ತಿಕೊಂಡಿವೆ. ಇನ್ನು ದಸರಾ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಹೆಚ್ಚುವರಿ ಬಸ್ಸುಗಳನ್ನು ಓಡಿಸಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಬಿಎಂಟಿಸಿ ಬಸ್‌ಗಳನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಿಎಂಟಿಸಿ ಬಸ್ ಗಳು ಸಂಚರಿಸಲಿವೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಯೋಜನೆ ರೂಪಿಸಿದೆ.

ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ರಾಜ್ಯದಾದ್ಯಂತ ಪ್ರಯಾಣಿಕರ ಅಗತ್ಯತೆಗಳಿಗೆ ಅನುಗುಣವಾಗಿ ವಿವಿಧ ಪಟ್ಟಣಗಳ ನಡುವೆ ವಿಶೇಷ ಬಸ್‌ ಸಂಚಾರ ಆರಂಭಿಸಲಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಅಂತರಾಷ್ಟ್ರೀಯ ರಾಜ್ಯ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಬಿಡುಗಡೆ ಮಾಡಲಾಗಿದೆ. ಇಷ್ಟು ದಿನಗಳ ಕಾಲ ಬೆಂಗಳೂರಿಗೆ ಮಾತ್ರವೇ ಸೀಮಿತವಾಗಿದ್ದ ಬಿಎಂಟಿಸಿ ಬಸ್‌ಗಳು ಇನ್ನು ಮುಂದೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಲಿವೆ.

ಅಕ್ಟೋಬರ್ 10 ರಂದು ಕೆಎಸ್‌ಆರ್‌ಟಿಸಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಬಿಎಂಟಿಸಿ ಬಸ್‌ಗಳನ್ನು ಓಡಿಸಲು ಸೂಚನೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಮನವಿ ಮೇರೆಗೆ ಬಿಎಂಟಿಸಿ ಹೊರ ಜಿಲ್ಲೆಗಳಿಗೂ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.

3 days power cut in Bengaluru In which areas power cut, here is the complete information

Comments are closed.