ಕಳೆದ ಐದಾರು ಆ ತಿಂಗಳಿನಿಂದ ಮನೆಯಲ್ಲಿ ಸದಾ ಸೂತಕದ ಛಾಯೆ. ಒಮ್ಮೊಮ್ಮೆ ಒಬ್ಬೊಬ್ಬರು ಬಾಳಿ ಬದುಕಬೇಕಿದ್ದ ಮನೆ ಮಗನನ್ನು ನೆನೆದು ಕಣ್ಣೀರಿಡೋದು ಮತ್ತೆ ಸಾವರಿಸಿಕೊಳ್ಳೋದು. ಆದರೂ ಆ ಮನೆಯ ಖುಷಿಯ ಒರತೆಯನ್ನು ಬತ್ತದಂತೆ ಕಾಪಾಡಿದ್ದು, ಆ ಮನೆಗೆ ಬರಲು ಸಜ್ಜಾಗಿದ್ದ ಕುಡಿ. ಇದು ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಮನೆಯ ಕತೆ. ಆದರೆ ಅಕ್ಟೋಬರ್ ತಿಂಗಳು ಆಮನೆಯಲ್ಲಿ ಮತ್ತೊಮ್ಮೆ ಜೀವಚೈತನ್ಯ ತುಂಬಿಸುವ ವಿಶ್ವಾಸ ಮೂಡಿಸಿದ್ದು, ಅಕ್ಟೋಬರ್ 17 ನೇತಾರೀಕಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಹೌದು ಎಲ್ಲದೂ ಅಂದುಕೊಂಡಂತೆ ಆದರೇ ಅಕ್ಟೋಬರ್ 17 ರಂದು ದಿ.ನಟ ಚಿರಂಜೀವಿ ಸರ್ಜಾ ಮನೆಯಲ್ಲಿ ಮೂರು ಮೂರು ಖುಷಿಗಳು ಒಟ್ಟಿಗೆ ಮೇಳೈಸಲಿವೆ. ಅಂದು ಇತ್ತೀಚಿಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಅಂದೇ ಮೇಘನಾ ಸರ್ಜಾ ಡೆಲಿವರಿಯಾಗೋ ನೀರಿಕ್ಷೆಯಿದ್ದು, ತಂದೆ ಜನಿಸಿದ ದಿನದಂದೇ ಮಗುವು ಈ ಜಗತ್ತಿಗೆ ಬರಲಿದೆ. ಇನ್ನೊಂದೆಡೆ ಚಿರಂಜೀವಿ ಸರ್ಜಾ ತಮ್ಮ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹೊಸ ಚಿತ್ರ ಜಾಂಬವಂತ ಮುಹೂರ್ತದಲ್ಲಿ ಪಾಲ್ಗೊಳ್ಳಲಿದ್ದು, ಅಂದೇ ತಮ್ಮ ಗಡ್ಡಕ್ಕೆ ಮುಕ್ತಿ ನೀಡಿ ಹೊಸ ರೂಪದಲ್ಲಿ ತೆರೆಗೆ ಬರಲಿದ್ದಾರೆ.

ಹೀಗಾಗಿ ನಗುವೇ ಮಾಸಿ ಹೋದಂತಿದ್ದ ಆ ಮನೆಗೆ ಅಕ್ಟೋಬರ್ 17 ಒಂದಿಷ್ಟು, ಖುಷಿ,ಸಮಾಧಾನ ಹಾಗೂ ಸಂಭ್ರಮ ಹೊತ್ತು ತರಲಿದೆ. ಈ ಮೊದಲು ಮೇಘನಾ ಡೆಲಿವರಿ ದಿನಾಂಕ ನವೆಂಬರ್ ಗೆ ನಿಗದಿಯಾಗಿತ್ತು. ಆದರೆ ಮಗು ಆರೋಗ್ಯಕರವಾಗಿ ಬೆಳವಣಿಗೆಯಾಗಿರೋದರಿಂದ ಅಕ್ಟೋಬರ್ ನಲ್ಲೇ ಹೆರಿಗೆಯಾಗಬಹುದೆಂದು ವೈದ್ಯರು ಮೇಘನಾಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಕ್ಟೋಬರ್ 17 ಕ್ಕೆ ಚಿರು ಉತ್ತರಾಧಿಕಾರಿ ಈ ಜಗತ್ತಿಗೆ ಬರೋ ನೀರಿಕ್ಷೆಯಲ್ಲಿದೆ ಕುಟುಂಬ.

ಚಿರಂಜೀವಿ ಸರ್ಜಾ ಬದುಕಿದ್ದರೇ ಈ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಯಾಕೆಂದರೇ ಹುಟ್ಟುವ ಮಗುವಿವಾಗಿ ಚಿರು ನೂರೆಂಟು ಕನಸು ಕಂಡಿದ್ದರಂತೆ. ಅಷ್ಟೇ ಅಲ್ಲ ಮೇಘನಾ ಸೀಮಂತ, ಮಗುವಿನ ನಾಮಕರಣ ಹೀಗೆ ಎಲ್ಲ ಗಳಿಗೆಯನ್ನೂ ವಿಭಿನ್ನವಾಗಿ, ಅದ್ದೂರಿಯಾಗಿ ಆಚರಿಸೋಕೆ ಪ್ಲ್ಯಾನ್ ಮಾಡಿದ್ದರಂತೆ. ಆದರೆ ವಿಧಿ ಆ ಖುಷಿಯನ್ನು ಅವರಿಂದ ಕಿತ್ತುಕೊಂಡು ಬಾರದ ಲೋಕಕ್ಕೆ ಕರೆದೊಯ್ದಿದೆ. ಹೀಗಾಗಿ ಹೊಸ ಜೀವದ ಆಗಮನವನ್ನು ನೋವಿನಿಂದಲೇ ಸ್ವಾಗತಿಸುವ ಸ್ಥಿತಿ ಸರ್ಜಾ ಕುಟುಂಬಕ್ಕಿದೆ.

ಇನ್ನು ಅಣ್ಣನ ಅನುಪಸ್ಥಿತಿಯಲ್ಲಿ ಅತ್ತಿಗೆಯನ್ನು ಸ್ವಂತ ಮಗನಂತೆ ನಿಂತು ಆರೈಕೆ ಮಾಡ್ತಿರೋ ಧ್ರುವ ಸರ್ಜಾ, ಅಣ್ಣನ ನೆನಪಿಗಾಗಿ ತಮ್ಮ ಚಿತ್ರದ ಮುಹೂರ್ತವನ್ನು ಅವರ ಹುಟ್ಟುಹಬ್ಬದಂದೇ ಮಾಡಲು ನಿದೇಶಕ,ನಿರ್ಮಾಪಕರಲ್ಲಿ ಮನವಿ ಮಾಡಿದ್ದರಂತೆ. ಅಷ್ಟೇ ಅಲ್ಲ ಅತ್ತಿಗೆಗೆ ಅದ್ದೂರಿ ಸೀಮಂತ ಮಾಡಿ ಅಣ್ಣನ ಸೆ ನೆರವೇರಿಸಿರೋ ಧ್ರುವ ಈಗಾಗಲೇ ಹುಟ್ಟುವ ಮಗುವಿವಾದಿ ತೊಟ್ಟಿಲನ್ನು ಖರೀದಿಸಿದ್ದಾರಂತೆ.