ಸೋಮವಾರ, ಏಪ್ರಿಲ್ 28, 2025
HomeBreakingರಾಸಲೀಲೆ ಸಿಡಿ ಪ್ರಕರಣ : ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ರಾ ….?

ರಾಸಲೀಲೆ ಸಿಡಿ ಪ್ರಕರಣ : ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ರಾ ….?

- Advertisement -

ಬೆಂಗಳೂರು : ಸರಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಮುಂಬೈಗೆ ಹೋದ 12 ಮಂದಿ ಶಾಸಕರದ್ದೂ ಸಿ.ಡಿಗಳಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ ? ಅಲ್ಲದೇ ಸಿನಿಮಾ ರಂಗದ ಪರಿಣಿತರೂ ಜತೆಯಲ್ಲೇ ಇದ್ದರು. ಅವರೇನಾದರೂ ಮಾಡಿರಬಹುದಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಡಿಯಲ್ಲಿ ಇದ್ದಾರೆನ್ನಲಾದ ಯುವತಿಯನ್ನು ಸಂತ್ರಸ್ತೆ ಎನ್ನುತ್ತಿದ್ದೀರಿ. ಆ ಹೆಣ್ಣು ಮಗಳು ಭೇಟಿ ನೀಡಿದ ಸ್ಥಳದ ವಿವರ, ಆಕೆಯ ಭಾವಚಿತ್ರವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಆಕೆ ಸಂತ್ರಸ್ತಳಾಗಿದ್ದು, ಅವರ ಕುಟುಂಬಕ್ಕೆ ನಿಜವಾಗಿಯೂ ಕಿರುಕುಳ ಆಗಿದ್ದರೆ ಸಾರ್ವಜನಿಕವಾಗಿ ಬಂದು ದೂರು ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ಘಟನೆಯಿಂದ ನೊಂದ ಆಕೆಯ ಕುಟುಂಬವನ್ನು ಸಂತ್ರಸ್ತರು ಎನ್ನಬೇಕೋ. ಯುವತಿಯನ್ನೇ ಸಂತ್ರಸ್ತೆ ಎನ್ನಬೇಕೋ. ಸಿ.ಡಿ ನಕಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರನ್ನು, ಅವರ ಸಹೋದರರು, ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸಂತ್ರಸ್ತರು ಎನ್ನಬೇಕೋ ಎಂದಿದ್ದಾರೆ. ಆರು ಮೇಧಾವಿ ಸಚಿವರು ತಮ್ಮ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಸಲಹೆ ಕೊಟ್ಟವರು ಯಾರು ಎಂಬುದು ಪ್ರಶ್ನೆ. ಸಚಿವರಿಗೆ ಸ್ವಯಂ ಆತ್ಮವಿಶ್ವಾಸ ಇದ್ದಿದ್ದರೆ ತಡೆ ತರುವ ಪ್ರಶ್ನೆ ಏಕೆ ಉದ್ಭವಿಸುತ್ತಿತ್ತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇವೆಲ್ಲವೂ ವ್ಯಕ್ತಿಯ ಖಾಸಗಿ ಬದುಕಿನ ಹವ್ಯಾಸಕ್ಕೆ ಸಂಬಂಧಿಸಿದ ವಿಷಯಗಳು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಂಗತಿಯನ್ನು ರೆಕಾರ್ಡ್‌ ಮಾಡಿ ರಾಜಕೀಯಕ್ಕೆ ಬಳಸುವ ಕೆಲಸವನ್ನು ನಮ್ಮ ಕುಟುಂಬ ಎಂದೂ ಮಾಡಿಲ್ಲ. ನಾನು ಕೂಡ ಒಮ್ಮೆ ತಪ್ಪು ಮಾಡಿದ್ದೆ. ವಿಧಾನಸಭೆಯಲ್ಲೇ ಅದನ್ನು ಒಪ್ಪಿಕೊಂಡಿದ್ದೇನೆ. ತಿದ್ದಿಕೊಂಡು ನಡೆಯುವುದು ಮುಖ್ಯ ಎಂದಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular