ಮಂಗಳವಾರ, ಏಪ್ರಿಲ್ 29, 2025
HomeBreakingRobert Romawia Royte:ಹೆಚ್ಚು ಮಕ್ಕಳನ್ನು ಹೆತ್ತರೆ ಬಹುಮಾನ…! 1 ಲಕ್ಷ ರೂಪಾಯಿ ಗಿಫ್ಟ್...

Robert Romawia Royte:ಹೆಚ್ಚು ಮಕ್ಕಳನ್ನು ಹೆತ್ತರೆ ಬಹುಮಾನ…! 1 ಲಕ್ಷ ರೂಪಾಯಿ ಗಿಫ್ಟ್ ಘೋಷಿಸಿದ ಸಚಿವ…!!

- Advertisement -

ವಿಶ್ವದ ಹಲವು ರಾಷ್ಟ್ರದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಯಲ್ಲಿದೆ. ಭಾರತದಲ್ಲೂ ಜನನ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂಬ ಕೂಗಿದೆ. ಆದರೆ ಇಲ್ಲೊಬ್ಬರು ಸಚಿವರು ಮಾತ್ರ ಅತಿ ಹೆಚ್ಚು ಮಕ್ಕಳನ್ನು ಹೆತ್ತವರಿಗೆ ಬಹುಮಾನ ಘೋಷಿಸಿ ಗಮನ ಸೆಳೆದಿದ್ದಾರೆ.

ಇಷ್ಟಕ್ಕೂ ಇಂತಹೊಂದು ಯೋಜನೆ ಕರ್ನಾಟಕದಲ್ಲಿ ಘೋಷಣೆಯಾಗ್ತಿದೆ ಅಂತ ನೀವು ಖುಷಿಯಾಗಬೇಡಿ. ಇಂತಹೊಂದು ಆಫರ್ ನ್ನು ತಮ್ಮ ಕ್ಷೇತ್ರದ ಜನತೆಗೆ ನೀಡಿರೋದು ದೂರದ ಮಿಜೋರಾಂ ರಾಜ್ಯದ ಸಚಿವರು.

ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ರೋಮಾವಿಯಾ ರಾಯಟ್ಟೆ ತಮ್ಮ ಕ್ಷೇತ್ರದ ಜನತೆಗೆ ಇಂತಹದೊಂದು ಕಲರ್ ಫುಲ್ ಆಫರ್ ನೀಡಿದ್ದಾರೆ. ತಾವು ಪ್ರತಿನಿಧಿಸುವ ಐಜ್ವಾಲ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದುವ ಅಥವಾ ಹೆರುವ ಪೋಷಕರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಬರ್ಟ್ ರೋಮಾವಿಯಾ ಘೋಷಿಸಿದ್ದಾರೆ.

ಮಿಜೋರಾಂನಲ್ಲಿ ಮಿಜೋ ಬುಡಕಟ್ಟು ಜನಾಂಗದ ಜನಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಮಿಜೋ ಬುಡಕಟ್ಟು ಜನರ ಸಂಖ್ಯೆಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ರಾಬರ್ಟ್ರೋ ಮಾವಿಯಾ ಹೇಳಿದ್ದು, ಈ ಹಣವನ್ನು ತಮ್ಮ ವೈಯಕ್ತಿಕ ನಿಧಿಯಿಂದ ಕೊಡುವುದಾಗಿ ಹೇಳಿದ್ದಾರೆ.

2011 ರ ಜನಗಣತಿ ಪ್ರಕಾರ  ಮಿಜೋರಾಂ 10.91 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ದೇಶದ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. 21,087 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿರುವ  ಮಿಜೋರಾಂನ ಶೇಕಡಾ 91. ರಷ್ಟು ಅರಣ್ಯವಿದೆ.

ಜನಸಂಖ್ಯೆ ಹೆಚ್ಚಿಸಲು ಸಚಿವರು ನೀಡಿರುವ ಆಫರ್ ಈಗ ಚರ್ಚೆಗೆ ಗ್ರಾಸವಾಗಿದೆ.ಜನರಿಗೆ ಇಂತಹದೊಂದು ಆಫರ್ ನೀಡಿರೋ ರಾಬರ್ಟ್ ರಾಯ್ಟೆ ವೈಯಕ್ತಿಕ ಬದುಕಿನಲ್ಲೂ ಇದನ್ನು ಪಾಲಿಸಿದ್ದು, ಸಚಿವರಿಗೆ ನಾಲ್ಕು ಮಕ್ಕಳಿದ್ದಾರೆ.

RELATED ARTICLES

Most Popular