ಚಿಕ್ಕಮಗಳೂರು : ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರ ಆಪ್ತನ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆಯಲ್ಲಿ ನಕ್ಷತ್ರ ಆಮೆ, ಕಲ್ಲು ಆಮೆ, ಪಿಸ್ತೂಲ್, ಗಂಧದ ತುಂಡು, ಜಿಲೆಟಿನ್ ಕಡ್ಡಿ, ಸ್ಪೋಟಕ ಸೇರಿದಂತೆ ಅಕ್ರಮವಾಗಿ ಸಂಗ್ರಹಿಸಿದ್ದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಟಿ.ಡಿ.ರಾಜೇಗೌಡರ ಆಪ್ತನಾಗಿರೋ ಶಬರೀಶ್ ಎಂಬಾತ ಆನೆದಂತ ಕಳ್ಳ ಸಾಗಾಣಿಕೆ ಮಾಡುವ ವೇಳೆಯಲ್ಲಿ ಬಂಧಿತನಾಗಿದ್ದ.

ಈ ಹಿನ್ನೆಲೆಯಲ್ಲಿ ಶೃಂಗೇರಿಯ ಕಾಂಚಿನಗರದಲ್ಲಿರುವ ಆತನ ಮನೆ ಮೇಲೆ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದ್ದು, ಶಬರೀಶ್ ತಂದೆ ರಮೇಶ್ನನ್ನು ಕೂಡ ಈ ವೇಳೆ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.