ಕೊರೊನಾ ಪೀಡಿತ ದೇಶಗಳಿಗೆ ಕೆಲಸ, ಪ್ರವಾಸ ಹೋದವರಿಗಿಲ್ಲಾ ಲೈಫ್ ಇನ್ಶೂರೆನ್ಸ್ !

0

ನವದೆಹಲಿ : ಕೊರೊನಾ ವೈರಸ್ ಸೋಂಕು ಜನಜೀವನದ ಮೇಲೆ ಮಾತ್ರವಲ್ಲ, ವ್ಯಾಪಾರ ವಹಿವಾಟಿನ ಮೇಲೆಯೂ ಗಂಭೀರ ಪರಿಣಾಮವನ್ನು ಉಂಟುಮಾಡುತ್ತಿದೆ. ಇದೀಗ ಕೊರೊನಾ ಪೀಡಿತ ದೇಶಗಳಿಗೆ ಪ್ರವಾಸ ಹೋದವರಿಗೆ ಜೀವ ವಿಮಾ ಕಂಪೆನಿಗಳು ಇನ್ಶುರೆನ್ಸ್ ನೀರಾಕರಿಸುತ್ತಿದ್ದು, ಹೊಸ ವಿಮಾ ಸೌಲಭ್ಯ ಪಡೆಯಲು ಕನಿಷ್ಠ 2 ತಿಂಗಳು ಕಾಯಲೇ ಬೇಕು.

ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಸದ್ಯ ಚೀನಾ ಮಾತ್ರವಲ್ಲದೇ, ಇಂಡೋನೇಷ್ಯಾ, ಜಪಾನ್​, ಲಾವೋಸ್​, ಮಲೇಷ್ಯಾ, ಫಿಲಿಪ್ಪೀನ್ಸ್​, ದಕ್ಷಿಣ ಕೊರಿಯಾ, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಮ್ಯಾನ್ಮಾರ್, ಕಾಂಬೋಡಿಯಾ, ಬ್ರೂನೈ, ತಿಮೋರ್ ಲೆಸ್ಟೆಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಅಥವಾ ನೆಲೆಸಿರುವ ಭಾರತೀಯರು ಮುಂದಿನ ಆದೇಶದ ತನಕ ಲೈಫ್ ಇನ್ಶೂರೆನ್ಸ್​ ಕವರ್​ ಹೊಸದಾಗಿ ನೀಡದಿರಲು ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳು ತೀರ್ಮಾನಿಸಿವೆ.

ಚೀನಾ ಮತ್ತು ಆಗ್ನೇಯ ಏಷ್ಯಾ ದೇಶಗಳಿಂದ ಉದ್ಯೋಗ ಅಥವಾ ಪ್ರವಾಸಕ್ಕೆ ತೆರಳಿ ಹಿಂದಿರುಗಿದ್ದವರಿಗೆ ಮುಂದಿನ ಎರಡು ತಿಂಗಳುಗಳ ಕಾಲಾವಧಿಗೆ ಹೊಸದಾಗಿ ಜೀವ ವಿಮಾ ಸೌಲಭ್ಯ ಸಿಗಲಾರದು. ಅಲ್ಲದೇ ಸೂಕ್ತ ವೈದ್ಯಕೀಯ ತಪಾಸಣೆಯ ಬಳಿಕವೇ ಹೊಸ ಜೀವವಿಮೆ ಪಡೆಯಬಹುದಾಗಿದೆ.

ಮಾತ್ರವಲ್ಲ ಕೊರೊನಾ ವೈರಸ್ ಭೀತಿಯಿಂದಾಗಿ ಜೀವ ವಿಮಾ ಕಂಪನಿಗಳು ಲೈಫ್ ಇನ್ಶೂರೆನ್ಸ್ ಇಶ್ಯೂ ಮಾಡಲು ಇದೀಗ ನಿಬಂಧನೆ ಹಾಕಲು ಚಿಂತನೆ ನಡೆಸಿವೆ. ಇನ್ನೂ ಎರಡು ಮೂರುದ ದಿನಗಳಲ್ಲಿ ವಿಮಾ ಕಂಪೆನಿಗಳು ಈ ಸಂಬಂಧ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.