ಸೋಮವಾರ, ಏಪ್ರಿಲ್ 28, 2025
HomeBreakingPM Modi's visit :ಪ್ರಧಾನಿ ಮೋದಿ ವಾರಣಾಸಿ ಭೇಟಿ ಪ್ರಯುಕ್ತ ಮಸೀದಿಗಳೂ ‘ಕೇಸರಿ’ಮಯ..!

PM Modi’s visit :ಪ್ರಧಾನಿ ಮೋದಿ ವಾರಣಾಸಿ ಭೇಟಿ ಪ್ರಯುಕ್ತ ಮಸೀದಿಗಳೂ ‘ಕೇಸರಿ’ಮಯ..!

- Advertisement -

ನವದೆಹಲಿ : ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಶ್ರೀ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್​ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ದೇಗುಲದ ಕಟ್ಟಡಗಳ ಜೀರ್ಣೋದ್ಧಾರವನ್ನೂ ಮಾಡಲಾಗಿದ್ದು ಕಾಶಿ ವಿಶ್ವನಾಥ ದೇಗುಲ ಹೊಸ ರೂಪವನ್ನೇ ಪಡೆದುಕೊಂಡಿದೆ. ಡಿಸೆಂಬರ್​ 13ರಂದು ಪ್ರಧಾನಿ ನರೇಂದ್ರ ಮೋದಿ (PM Modi’s visit) ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್​ ಉದ್ಘಾಟನೆ ಕಾರ್ಯಕ್ರವನ್ನು ನೆರವೇರಿಸಲಿದ್ದಾರೆ.

ಪ್ರಧಾನಿ ಮೋದಿ ಕಾಶಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಎಲ್ಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ ಯಂತೆ. ಮಾರ್ಗ ಮಧ್ಯದಲ್ಲಿ ಸಿಗುವ ಮಸೀದಿಗೂ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ಮಸಿದಿ ಸಮಿತಿ ಸದಸ್ಯರು ಆರೋಪ ಮಾಡಿದ್ದಾರೆ.

ಮಸೀದಿಯ ಸಮಿತಿಯ ಆರೋಪಗಳಿಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹಿಂದೊಮ್ಮೆ ಮಾರ್ಗಮಧ್ಯದ ಎಲ್ಲಾ ಕಟ್ಟಡಗಳಿಗೆ ಒಂದೇ ಬಣ್ಣವನ್ನು ಬಳಿಯಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಆದರೆ ಆಗ ಅವರು ತಿಳಿ ಗುಲಾಬಿ ಬಣ್ಣ ಬಳಿಯಲಾಗುತ್ತೆ ಎಂದು ಹೇಳಿದ್ದರು. ಆದರೆ ಕೇಸರಿ ಬಣ್ಣ ಬಳಿದಿದ್ದಕ್ಕೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಸೀದಿಗೆ ವಾಪಸ್​ ಬಿಳಿ ಬಣ್ಣ ಬಳಿಯಲಾಗಿದೆ.

ಬುಲನಾಲಾ ಪ್ರದೇಶದಲ್ಲಿರುವ ಮಸೀದಿಯು ಮೊದಲಿನಿಂದಲೂ ಬಿಳಿ ಬಣ್ಣದಲ್ಲಿತ್ತು. ಆದರೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಅಂಜುಮಾನ್​ ಇಂತೆಝಾಮಿಯಾ ಸಮಿತಿಯ ಒಪ್ಪಿಗೆಯನ್ನು ಕೇಳದೆಯೇ ಮಸೀದಿಗೆ ಕೇಸರಿ ಬಣ್ಣ ಬಳಿದಿದ್ದರು.ಆದರೆ ಇದಕ್ಕೆ ನಮ್ಮ ಸಮುದಾಯ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಾಪಸ್​ ಬಿಳಿ ಬಣ್ಣ ಬಳಿದಿದ್ದಾರೆ ಎಂದು ಮೊಹಮ್ಮದ್​ ಇಜಾಜ್​ ಹೇಳಿದ್ದಾರೆ.

ಇದನ್ನು ಓದಿ : Gp Capt Varun Singh : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬಚಾವಾದ ಏಕೈಕ ಸೇನಾಧಿಕಾರಿ ಯಾರು ಗೊತ್ತೇ..?

ಇದನ್ನೂ ಓದಿ : CDS Bipin Rawat chopper crash:‘ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

Mosque painted ‘saffron’ in Varanasi a week ahead of PM Modi’s visit

RELATED ARTICLES

Most Popular