Rohit Sharma : ಏಕದಿನ ಪಂದ್ಯಗಳ ನಾಯಕತ್ವದಿಂದ ಕೊಹ್ಲಿಗೆ ಕೊಕ್​; ಟೀಂ ಇಂಡಿಯಾ ನಾಯಕನಾಗಿ ರೋಹಿತ್​ ಶರ್ಮಾ ಆಯ್ಕೆ

ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಟೀಂ ಇಂಡಿಯಾ ತಂಡದ ನಾಯಕನಾಗಿ ರೋಹಿತ್​ ಶರ್ಮಾರನ್ನು (Rohit Sharma) ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಮುಂಬರುವ ಏಕದಿನ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಿಗೆ ರೋಹಿತ್​ ಶರ್ಮಾ ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿದ್ದಾರೆ. ಟೆಸ್ಟ್​ ಪಂದ್ಯಾವಳಿಗಳಲ್ಲಿ ರೋಹಿತ್​ ಶರ್ಮಾ ಉಪನಾಯಕನಾಗಿ ಇರಲಿದ್ದಾರೆ. ಈ ಮೂಲಕ ಉಪನಾಯಕನ ಸ್ಥಾನದಿಂದ ಅಜಿಂಕ್ಯ ರಹಾನೆಗೆ ಕೊಕ್​ ನೀಡಲಾಗಿದೆ.

ಟಿ 20 ವಿಶ್ವಕಪ್​​ ಪಂದ್ಯಾವಳಿಯಲ್ಲಿ ತಂಡದ ಕಳಪೆ ಪ್ರದರ್ಶನದ ಬಳಿಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ 20 ಪಂದ್ಯಾವಳಿಯ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ ಬಿಸಿಸಿಐ ಏಕದಿನ ಪಂದ್ಯಾವಳಿಗಳಿಂದಲೂ ನಾಯಕನ ಸ್ಥಾನದಿಂದ ವಿರಾಟ್​ ಕೊಹ್ಲಿಗೆ ಕೊಕ್​ ನೀಡಿದೆ. ಬಿಸಿಸಿಐನ ಈ ಮಹತ್ವದ ಘೋಷಣೆಯಿಂದಾಗಿ ಕೊಹ್ಲಿ ಕೇವಲ ಟೆಸ್ಟ್​ ಪಂದ್ಯಾವಳಿಗಳಿಗೆ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ.

ಡಿಸೆಂಬರ್​​ 26 ರಿಂದ 30ರವರೆಗೆ ಸೆಂಚುರಿಯನ್​ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್​ ಪಂದ್ಯವನ್ನು ಆಡಲಿದೆ. ಜೋಹಾನ್ಸ್​ ಬರ್ಗ್​ನಲ್ಲಿ ಜನವರಿ 3ರಿಂದ 07ರವರೆಗೆ ಎರಡನೇ ಟೆಸ್ಟ್​ ಪಂದ್ಯವನ್ನು ಹಾಗೂ ಮೂರನೇ ಟೆಸ್ಟ್​ ಪಂದ್ಯವನ್ನು ಜನವರಿ 11ರಿಂದ 15ರವರೆಗೆ ಕೇಪ್​ ಟೌನ್​​ನಲ್ಲಿ ಆಡಲಿದೆ. ಈ ಎಲ್ಲಾ ಪಂದ್ಯಗಳಿಗೆ ವಿರಾಟ್​ ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿ ಹಾಗೂ ರೋಹಿತ್​ ಶರ್ಮಾ ಉಪನಾಯಕನಾಗಿ ಇರಲಿದ್ದಾರೆ.

ಇದನ್ನು ಓದಿ : Hardik Pandya To Retire : ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಿವೃತ್ತಿ : ಶೀಘ್ರದಲ್ಲೇ ಅಧಿಕೃತ ಘೋಷಣೆ

ಇದನ್ನೂ ಓದಿ : David Warner Playing RCB : IPL 2022 ಆರ್‌ಸಿಬಿ ತಂಡದಲ್ಲಿ ಆಡುವುದನ್ನು ಖಚಿತ ಪಡಿಸಿದ ಡೇವಿಡ್‌ ವಾರ್ನರ್‌

Rohit Sharma will replace Virat Kohli as Captain in ODIs and T20Is going forward

Comments are closed.