ಕೊರೋನಾ ಸಂಕಷ್ಟದ ನಡುವೆಯೂ ಕರಾವಳಿ ಮೂಲಕದ ಬೆಡಗಿ ಮಿಸ್ ಯುನಿವರ್ಸ್ ರನ್ನರ್ ಅಪ್ ಗೌರವ ಪಡೆಯುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಅಮೇರಿಕದ ಪ್ಲೋರಿಡಾದಲ್ಲಿ ನಡೆದ 69 ನೇ ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಖ್ಯಾತಿಯ ಆಡೆಲಿನ್ ಕ್ಯಾಸ್ತಲಿನೋ 3 ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆಡೆಲಿನ್ ಉಡುಪಿ ಉದ್ಯಾವರ ಮೂಲದವರು ಎಂಬುದು ಕನ್ನಡಿಗರ ಸಂಭ್ರಮ.

2019 ರಲ್ಲಿ ಮಿಸ್ ಕೋಕಾಬೆರ್ರಿ ದಿವಾ ಹಾಗೂ 2020 ರಲ್ಲಿ ಲಿವಾ ಮಿಸ್ ದಿವಾ ಯುನಿವರ್ಸ್ ಮಿಸ್ ಇಂಡಿಯಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಈ ಕರಾವಳಿ ಮೂಲದ ಬೆಡಗಿ ಇದೀಗ ಮಿಸ್ ಯುನಿವರ್ಸ್ ನಲ್ಲಿ 3 ನೇ ರನ್ನರ್ ಅಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

22 ವರ್ಷದ ಆಡೆಲಿನ್ ವಾಣಿಜ್ಯ ನಗರಿ ಮುಂಬೈನ ನಿವಾಸಿಯಾಗಿದ್ದು, ಕುವೈಟ್ ನಲ್ಲಿ ಹುಟ್ಟಿದ ಆಡೆಲಿನ್ ಮುಂಬೈನ ಸೇಂಟ್ ಕ್ಸೆವಿಯರ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. 2021 ರ ಸಾಲಿನ ಈ ಸ್ಪರ್ಧೆಯನ್ನು ಮೇ 16 ರಂದು ನಡೆಸಲಾಗಿದ್ದು, ಇದರಲ್ಲಿ ಆಡೆಲಿನ್ ರನ್ನರ್ ಅಪ್ ಗೌರವ ಪಡೆದಿದ್ದಾರೆ.

70 ಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯಲ್ಲಿ ಮಿಸ್ ಆಡೆಲಿನ್ ವಿನ್ನರ್ ಮೆಜಾಗೆ ಪ್ರಬಲ ಸ್ಪರ್ಧಿಯಾಗಿದ್ದರು. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಆಡೆಲಿನ್ ಶಿಕ್ಷಣ ಪೊರೈಸಿ ಪ್ರಸ್ತುತ ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
