ಮಂಗಳವಾರ, ಏಪ್ರಿಲ್ 29, 2025
HomeBreakingಮಗನನ್ನು ಕಳೆದುಕೊಂಡ ಕುಟುಂಬ ಅಭಿಮಾನಕ್ಕೆ ಕಣ್ಣೀರಾದ ಪವರ್ ಸ್ಟಾರ್….! ಭಾವುಕ ಟ್ವೀಟ್…!!

ಮಗನನ್ನು ಕಳೆದುಕೊಂಡ ಕುಟುಂಬ ಅಭಿಮಾನಕ್ಕೆ ಕಣ್ಣೀರಾದ ಪವರ್ ಸ್ಟಾರ್….! ಭಾವುಕ ಟ್ವೀಟ್…!!

- Advertisement -

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಯುವರತ್ನನ ಹವಾ ಜೋರಾಗಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರದ ನಡುವೆ ಅತಿ ಹೆಚ್ಚು ಸುದ್ದಿಯಾಗಿದ್ದು, ಮೈಸೂರಿನ ಪುನೀತ್ ಅಭಿಮಾನಿ ಕುಟುಂಬ. ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಅದೇ ದುಃಖದಲ್ಲಿ ಮಗನ ಕಟೌಟ್ ಜೊತೆ ಅವನಿಗೂ ಟಿಕೇಟ್ ಖರೀದಿಸಿ ಸಿನಿಮಾ ನೋಡಿದೆ.

ಹೌದು ಮೈಸೂರಿನ ಹರಿಕೃಷ್ಣ ಎಂಬ ಬಾಲಕ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದು, ಯುವರತ್ನ ಸಿನಿಮಾ ನೋಡೋ ಹಂಬಲದಲ್ಲಿದ್ದ. ಆದರೆ ಕಳೆದ ಮೂರು ತಿಂಗಳ ಹಿಂದೆ ಈಜಲು ಹೋದ ಹರಿಕೃಷ್ಣ ನೀರಿನ ಸೆಳವಿಗೆ ಸಿಕ್ಕು ಸಾವನ್ನಪ್ಪಿದ್ದಾನೆ. ಮನೆ ಮಗನನ್ನು ಕಳೆದುಕೊಂಡು ಕಂಗಾಲಾದ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಈ ಮಧ್ಯೆ ಏಪ್ರಿಲ್ 1 ರಂದು ಯುವರತ್ನ ಸಿನಿಮಾ ರಿಲೀಸ್ ಆಗಿದೆ. ಯುವರತ್ನ ಸಿನಿಮಾ ನೋಡಲು ಕಾದಿದ್ದ ಹರಿಕೃಷ್ಣ ಸಿನಿಮಾ ರಿಲೀಸ್ ಆಗೋ ಹೊತ್ತಿಗೆ ಇರಲಿಲ್ಲ. ಹೀಗಾಗಿ ಮೃತ ಪುತ್ರನ ಆತ್ಮಶಾಂತಿಗಾಗಿ ಕುಟುಂಬಸ್ಥರು ಅವನ ಕಟೌಟ್ ಜೊತೆ ಅವನಿಗೂ ಟಿಕೇಟ್ ಖರೀಸಿದಿ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ದಾರೆ.

ಮೃತ ಪುತ್ರ ಹರಿಕೃಷ್ಣನ್ ಜೊತೆ ಕುಟುಂಬಸ್ಥರು ಯುವರತ್ನ ಸಿನಿಮಾ ನೋಡಿದ ಪೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದನ್ನು ನೋಡಿದ ನಟ ಪುನೀತ್ ರಾಜಕುಮಾರ್ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲ ಈ ಕುಟುಂಬದ ಅಭಿಮಾನದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮೈಸೂರಿನ ಮುರುಳಿಧರ್ ಹಾಗೂ ಕುಟುಂಬದವರು   ದಿ.ಹರಿಕೃಷ್ಣ್ ನ ಪೋಟೋ ಜೊತೆ ಸಿನಿಮಾ ನೋಡಿದನ್ನು ಕೇಳಿ ಮನಸ್ಸಿಗೆ ದುಃಖವಾಯಿತು. ಅವರ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ಸಿಗಲಿ. ಬಾಲಕ ಹರಿಕೃಷ್ಣನ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಏಪ್ರಿಲ್ 1 ರಂದು ತೆರೆ ಕಂಡಿರುವ ಯುವರತ್ನ ಸಿನಿಮಾ ಪುನೀತ್ ರಾಜಕುಮಾರ್ ಫ್ಯಾನ್ಸ್  ಮನಗೆದ್ದಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

RELATED ARTICLES

Most Popular