ಮೈಸೂರು: ತಂದೆ-ತಾಯಿಯ ಅಗಲಿಕೆ ಸಹಿಸಿಕೊಳ್ಳಲಾಗದೇ ಮನನೊಂದ ಯುವಕ ತನ್ನ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವರದಿಯಾಗಿದೆ.

ಮೈಸೂರಿನ್ ಎನ್.ಆರ್.ಮೊಹಲ್ಲಾ ನಿವಾಸಿ 30 ವರ್ಷದ ಎಸ್.ಕಾರ್ತೀಕ್ ಆತ್ಮಹತ್ಯೆಗೆ ಶರಣಾದ ಯುವಕ. ವೃತ್ತಿಯಲ್ಲಿ ಮೆಡಿಕಲ್ ರೆಪ್ರೆಂಸಟೆಟಿವ್ ಆಗಿದ್ದ ಕಾರ್ತಿಕ್ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ.
ಕಾರ್ತೀಕ್ ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಸ್ನೇಹಿತರೇ ಯಾರಿಗಾದರೂ ನನ್ನಿಂದ ನೋವಾಗಿದ್ದರೇ ಕ್ಷಮಿಸಿ. ಇನ್ಮುಂದೆ ಕಾರ್ತಿಕ್ ನಿಮ್ಮೊಂದಿಗೆ ಇರುವುದಿಲ್ಲ ಎಂದು ಇಂಗ್ಲೀಷ್ ನಲ್ಲಿ ಡೆತ್ ನೋಟ್ ಬರೆದಿದ್ದಾನೆ ಎನ್ನಲಾಗಿದೆ.
ಕಾರ್ತೀಕ್ ತಾಯಿ ವೈದ್ಯರಾಗಿದ್ದು, ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ತಾಯಿ ನಿಧನವಾದ ಒಂದೇ ವರ್ಷದಲ್ಲಿ ತಂದೆ ಕೂಡ ಸಾವನ್ನಪ್ಪಿದ್ದರು ಎನ್ನಲಾಗಿದೆ. ತಂದೆ-ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ ಕಾರ್ತೀಕ್, ಈ ಹಿಂದೆಯೂ ಎರಡು ಬಾರಿ ಆತ್ಮಗತ್ಯೆಗೆ ಯತ್ನಿಸಿದ್ದ.
ತಾಯಿ ಸಾವನ್ನಪ್ಪಿದ ದಿನವೇ ವಿಷ ಸೇವಿಸಿದ್ದ ಕಾರ್ತಿಕ್ ನನ್ನು ಸ್ನೇಹಿತರು ಬಚಾವ್ ಮಾಡಿದ್ದರು. ಆ ಬಳಿಕ ತಂದೆ ತೀರಿಕೊಂಡಾಗ ಕಾರ್ತಿಕ್ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಮೂರನೇ ಪ್ರಯತ್ನದಲ್ಲಿ ಕಾರ್ತಿಕ್ ಸಾವಿನ ಮನೆಯ ಅತಿಥಿಯಾಗಿದ್ದಾನೆ.