Rekha Kadiresh murder : ಆರೋಪಿ ಪೀಟರ್, ಸೂರ್ಯ ಕಾಲಿಗೆ ಗುಂಡೇಟು

ಬೆಂಗಳೂರು : ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕು ಗೊಳಿಸಿದ್ದಾರೆ. ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ಕಾಲಿಗೆ ಗುಂಡೇಟು ತಗುಲಿದೆ.

ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರು ನಿನ್ನೆ ತನ್ನ ಮನೆ ಸಮೀಪದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಕದಿರೇಶ್ ಸಾವನ್ನಪ್ಪಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ  ಸೂರ್ಯ ಹಾಗೂ ಪೀಟರ್ ವಿರುದ್ದ ಅರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಂಧಿಸಲು ಹೋಗಿದ್ದ ವೇಳೆ ಆರೋಪಿ ಗಳಾದ ಸೂರ್ಯ ಮತ್ತು ಪೀಟರ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ‌ ವ್ಯಾಪ್ತಿಯ ಸುಮನಹಳ್ಳಿ ಶನಿ ಮಹಾತ್ಮ ದೇವಸ್ಥಾನದ ಬಳಿ ಬಂಧಿಸಿದ್ದಾರೆ.

ಕಾಲಿಗೆ ಪೊಲೀಸರ‌ ಗುಂಡೇಟು ತಗುಲಿ ಗಂಭೀರವಾಗಿ ಗಾಯ ಗೊಂಡಿದ್ದ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.

2018ರಲ್ಲಿ ಬೆಂಗಳೂರಿನ ಛಲವಾದಿ ಪಾಳ್ಯದ ಬಿಬಿಎಂಪಿ ಬಿಜೆಪಿ ಕಾರ್ಪೋರೇಟರ್ ಆಗಿದ್ದ ರೇಖಾ  ಪತಿ ಕದಿರೇಶ್ ಅವರನ್ನು ಹಾಡಹಗಲೇ ಕಾಟನ್‍ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ರೇಖಾ ಅವರನ್ನು ಮನೆಯಲ್ಲಿಯೇ ಕೊಲೆ ಮಾಡಲಾಗಿದೆ.

Comments are closed.