ಬೆಂಗಳೂರು : ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದಲ್ಲಿಯೂ ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಶ್ರಮಿಸುತ್ತಿದೆ. ಆದ್ರೆ ಕೊರೊನಾ ಮಹಮಾರಿ ಹಲವರನ್ನು ಬಲಿಪಡೆಯುತ್ತಿದೆ. ಅದ್ರಲ್ಲೂ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ NPS ನೌಕರರೇ ಇಂದು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ NPS ನೌಕರರ ಸಂಘ ಇಂದು ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಅನೇಕ ಹೋರಾಟಗಳೇ ನಡೆದಿದೆ. ರಾಜ್ಯ ಸರಕಾರವೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಈಡೇರಿಸಿಲ್ಲ. ಇದೀಗ ಕೊರೊನಾ ವಾರಿಯರ್ಸ್ ಆಗಿ ಬಹುತೇಕ NPS ನೌಕರರು ದುಡಿಯುತ್ತಿದ್ದಾರೆ. ಅಲ್ಲದೇ ಹಲವರು ಸಾವನ್ನಪ್ಪಿದ್ದಾರೆ. ಇಂತಹ ಎನ್ ಪಿಎಸ್ ನೌಕರರು ಹಾಗೂ ಅವಲಂಭಿತರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ರಾಜ್ಯ ಸರಕಾರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ NMOPS ಕಾರ್ಯಕಾರಿ ಸಮಿತಿಯು ಪ್ರಸಕ್ತ ಸಂದರ್ಭದಲ್ಲಿ ಸರ್ಕಾರಗಳ ಗಮನವನ್ನು ನಮ್ಮ ಸಮಸ್ಯೆಗಳ ಕಡೆ ಸೆಳೆಯಲು ಟ್ವೀಟರ್ ಅಭಿಯಾನವನ್ನು ಹಮ್ಮಿಕೊಂಡಿದೆ.

ಜೂನ್ 26ರಂದು 12 ಗಂಟೆಯಿಂದ 3 ಗಂಟೆಯ ವರೆಗೆ ಈ ಟ್ವೀಟರ್ ಅಭಿಯಾನ ನಡೆಯಲಿದೆ. #scrapNPSrestoredOPS ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುವ ಮೂಲಕ ಎನ್ ಪಿಎಸ್ ನೌಕರರು ಅಭಿಯಾನವನ್ನು ಬೆಂಬಲಿಸಬೇಕು. ಮಾತ್ರವಲ್ಲ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಟ್ವಿಟರ್ ಅಭಿಯಾನ #Restoreoldpensionದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ಅವರು ಮನವಿ ಮಾಡಿದ್ದಾರೆ