ಸಿಎಂ ಸರ್ವಪಕ್ಷ ಸಭೆ ಕುರಿತು ಕಾಂಗ್ರೆಸ್ ಶಾಸಕರ ಅಸಮಾಧಾನ

1

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ನಿಯಂತ್ರಣದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರು ಶಾಸಕರ ಸಭೆಯ ಕುರಿತು ಕಾಂಗ್ರೆಸ್ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ಲಾಕ್ ಡೌನ್ ಹೇರಿಕೆಯನ್ನು ಮಾಡಬೇಕು. ಅಲ್ಲದೇ ಬೆಂಗಳೂರಿನ ನಿವಾಸಿಗಳಿಗೆ ರಾಂಡಮ್ ಟೆಸ್ಟ್ ಮಾಡುವಂತೆ ಕಾಂಗ್ರೆಸ್ ಸಲಹೆಯನ್ನು ನೀಡಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್ ಶಾಸಕರ ಸಲಹೆಯನ್ನು ಸ್ವೀಕಾರ ಮಾಡಿಲ್ಲ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಹೇರಿಕೆಯನ್ನು ಮಾಡುವುದಿಲ್ಲ. ಬದಲಾಗಿ ಬೆಡ್ ಹೆಚ್ಚಳ ಮಾಡುವ ಕುರಿತು ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.

ಕೊರೊನಾ ವೈರಸ್ ಸೋಂಕು ಸಮುದಾಯದಕ್ಕೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಂಡಮ್ ಟೆಸ್ಟ್ ನಡೆಸಬೇಕಾದ ಅನಿವಾರ್ಯತೆಯಿದೆ. ಯಾವುದೇ ಲಕ್ಷಣಗಳು ಇಲ್ಲದವರಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಂಡಮ್ ಟೆಸ್ಟ್ ಮಾಡಬೇಕೆಂದು ಸಲಹೆ ನೀಡಿದ್ದೇವೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರು ಹೊರವಲಯದಲ್ಲಿನ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದೇವೆ. ನಮ್ಮ ಸಲಹೆಯನ್ನು ಸರಕಾರ ಪರಿಗಣಿಸಿಲ್ಲ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಜನರಿಗೆ ಸರಕಾರ ನೀಡುತ್ತಿರುವ ಸೌಲಭ್ಯ ಸಾಕಾಗುವುದಿಲ್ಲ. ಸರಕಾರಿ ಆಸ್ಪತ್ರೆಗಳಿಗೆ ಹೋದ್ರೆ ವಾಪಾಸ್ ಬರುವ ಯಾವುದೇ ಭರವಸೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಹೇರಿಕೆಯನ್ನು ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಆದರೆ ರಾಜ್ಯ ಸರಕಾರ ಲಾಕ್ ಡೌನ್ ಹೇರಿಕೆಗೆ ಸಿದ್ದವಿಲ್ಲ. ಎಲ್ಲವನ್ನೂ ಸರಕಾರವೇ ನಿರ್ಧರಿಸಿದ ಮೇಲೆ ನಮ್ಮನ್ನು ಯಾಕೆ ಸಭೆಗೆ ಕರೆಯಬೇಕಿತ್ತು ಎಂದು ಶಾಸಕ ಎನ್.ಎ.ಹ್ಯಾರೀಸ್ ಆರೋಪಿಸಿದ್ದಾರೆ.

1 Comment
  1. K.N.SHIVARAJA says

    ಮೂರೂ ದಿನದಿಂದ ರಾಜ್ಯ ಸರ್ಕಾರ ಬಡಕೊಳ್ತಾಯಿದೆ. ಲಾಕ್ ಡೌನ್ ಮಾಡಾಕೆ ಆಗಲ್ಲ ಅಂಥ. ಆರ್ಥಿಕ ತಾಕತ್ತು ರಾಜ್ಯಕ್ಕಿಲ್ಲ. ಕೇಂದ್ರ ನಯಾಪೈಸೆ ಕೊಡೋಕೂ ತಯಾರಿಲ್ಲ.
    ಹೀಗಿರುವಾಗ ಕಾಂಗ್ರೆಸ್ ಶಾಸಕರು ಹೋಗಿದ್ದು ಯಾಕೆ? ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಷ್ಟೆ.

Leave A Reply

Your email address will not be published.