ನವದೆಹಲಿ : ಯೆಸ್ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿ ಎಫೆಕ್ಟ್ ಗೆ ತುತ್ತಾಗಿದ್ದ ಫೋನ್ ಪೇ ಇದೀಗ 24 ಗಂಟೆಗಳ ನಂತರ ಪುನರಾರಂಭಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಖಾಸಗಿ ಸ್ವಾಮ್ಯದ ಯೆಸ್ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಫೋನ್ ಪೇ ಡಿಜಿಟಲ್ ವ್ಯವಹಾರ ಸ್ಥಗಿತಗೊಂಡಿತ್ತು.

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸದಂತೆ ಆರ್ ಬಿಐ ಸಂಸ್ಥೆಯ ಆಡಳಿತ ಮಂಡಳಿಯನ್ನು ಸೂಪರ್ ಸೀಡ್, ಆಡಳಿತ ಮಂಡಳಿಯನ್ನು ವಜಾ ಮಾಡಿತ್ತು. ಅಲ್ಲದೆ ಬ್ಯಾಂಕ್ ನಿರ್ವಹಣೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಪೋನ್ ಪೇ ಸೇವೆ ಕೂಡ ಸ್ಥಗಿತಗೊಂಡಿತ್ತು.

ದೇಶದಲ್ಲಿ ಸುಮಾರು 15 ಮಿಲಿಯನ್ ಗ್ರಾಹಕರು ಫೋನ್ ಪೇ ಬಳಕೆ ಮಾಡುತ್ತಿದ್ದಾರು. ಏಕಾಏಕಿ ಫೋನ್ ಪೇ ಡಿಜಿಟಲ್ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಗ್ರಾಹಕರು ಪರದಾಡುವಂತಾಗಿತ್ತು. ಯೆಸ್ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಫೋನ್ ಪೇ ಇದೀಗ ಐಸಿಐಸಿಐ ಬ್ಯಾಂಕಿನೊಂದಿಗೆ ವಹಿವಾಟು ಒಪ್ಪಂದ ಮಾಡಿಕೊಂಡಿದೆ.

ಇದರಿಂದಾಗಿ ಫೋನ್ ಪೇ ತನ್ನ ಸೇವೆಯನ್ನು ಪುನರಾರಂಭಿಸಿದೆ. ಈ ಕುರಿತು ಫೋನ್ ಪೇ ಇದೀಗ ತನ್ನ ಸೇವೆಯನ್ನು ಪುನರಾರಂಭ ಮಾಡಿರುವುದಾಗಿ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.