ಮಹಿಳಾ ಟಿ20 ವಿಶ್ವಕಪ್ : ಚಾಂಪಿಯನ್ ಪಟ್ಟಕ್ಕಾಗಿ ಭಾರತ – ಆಸ್ಟ್ರೇಲಿಯಾ ಕಾದಾಟ

0

ಮೆಲ್ಬೊರ್ನ್ : ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೈದಾನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಟೀಂ ಇಂಡಿಯಾದ ಮಹಿಳೆಯರು ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿಯೇ ಫೈನಲ್ ಪ್ರವೇಶಿಸಿರೋ ಭಾರತೀಯ ವನಿತೆಯರು ಗೆಲ್ಲುವ ಫೇವರೇಟ್ ತಂಡವೆನಿಸಿಕೊಂಡಿದೆ.

ಕಳೆದ ಬಾರಿಯ ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತಿದ್ದ ಭಾರತ ಇಂದು ಆಸ್ಟ್ರೇಲಿಯಾಕ್ಕೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನೂ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ಭಾರತ, ಮಳೆಯಿಂದಾಗಿ ಸೆಮಿಫೈನಲ್ ಪಂದ್ಯ ರದ್ದಾಗಿತ್ತು. ಹೀಗಾಗಿ ಸೆಮಿಫೈನಲ್ ಪಂದ್ಯವನ್ನೇ ಆಡದೇ ಭಾರತ ಫೈನಲ್ ಪ್ರವೇಶಿಸಿದೆ.

ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಮಳೆಯಿಂದಾಗಿ ಲೂವಿಸ್ ಢಕ್ ವರ್ತ್ ನಿಮಯದ ಮೂಲಕ ಗೆಲುವನ್ನು ಕಂಡಿದ್ದು 6ನೇ ಬಾರಿಗೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ.

ಲೀಗ್ ಹಂತದ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯ ವನಿತೆಯರು ಸೋಲಿನ ರುಚಿ ತೋರಿಸಿದ್ದು, ಇದೀಗ ಫೈನಲ್ ಪಂದ್ಯದಲ್ಲಿಯೂ ಇದೇ ಆಟ ಮುಂದುವರಿಸೋ ವಿಶ್ವಾಸದಲ್ಲಿದ್ದಾರೆ ಭಾರತೀಯ ವನಿತೆಯರು.

ಭಾರತದ ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮ ಪ್ರಚಂಡ ಫಾರ್ಮ್ ನಲ್ಲಿರೋದು ಭಾರತದ ವಿಶ್ವಾಸವನ್ನು ಹೆಚ್ಚಿಸಿದ್ರೆ, ದೀಪ್ತಿ ಶರ್ಮಾ, ರಾಧಾ ಯಾದವ್, ಪೂನಂ ಯಾದವ್, ಶಿಖಾ ಪಾಂಡೆ ಮತ್ತು ರಾಜೇಶ್ವರಿ ಗಾಯಕ್ ವಾಡ್ ಬೌಲಿಂಗ್ ನಲ್ಲಿ ಮಿಂಚು ಹರಿಸಿದ್ದಾರೆ.

ಆದರೆ ನಾಯಕಿ ಹರ್ಮನ್ ಪ್ರಿತ್ ಕೌರ್ ಮತ್ತು ಸ್ಮೃತಿ ಮಂದಾನ ಬ್ಯಾಟ್ ನಿಂದ ರನ್ ಹರಿಯುತ್ತಿಲ್ಲ. ಒಂದೊಮ್ಮೆ ಭಾರತೀಯ ವನಿತೆಯರು ಫೈನಲ್ ಪಂದ್ಯದಲ್ಲಿಯೂ ಇದೇ ಆಟವನ್ನು ಮುಂದುವರಿಸಿದ್ರೆ ಫೈನಲ್ ಗೆಲುವು ಕಷ್ಟವೇನಲ್ಲ.

ಆದರೆ ಆಸ್ಟ್ರೇಲಿಯಾ ತಂಡ ಕೂಡ ಬಲಿಷ್ಟವಾಗಿದ್ದು, 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ನಾಯಕಿ ಲನ್ನಿಂಗ್, ಅಲ್ಶಯಾ ಹೀಲಿ, ರಿಚಾ ಹೇನ್ಸ್, ಜೆಸ್ಸಿ ಜಾನ್ಸನ್ ಅದ್ಬುತ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ವಿಶ್ವಕಪ್ ಫೈನಲ್ ಹೈವೊಲ್ಟೇಜ್ ಪಂದ್ಯವಾಗೋದ್ರಲ್ಲಿ ಅನುಮಾನವೇ ಇಲ್ಲ.

ಸಂಭಾವ್ಯ ತಂಡ
ಭಾರತ :
ಶಿಫಾಲಿ ವರ್ಮಾ, ಸ್ಮೃತಿ ಮಂದಾನ, ಹರ್ಮನ್ ಪ್ರಿತ್ ಕೌರ್ (ನಾಯಕಿ), ತಾನಿಯಾ ಬಾಟಿಯಾ (ವಿ.ಕೀ), ಶಿಖಾ ಪಾಂಡೆ, ಪೂನಂ ಯಾದವ್, ರಾಜೇಶ್ವರಿ ಗಾಯಕ್ ವಾಡ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಜಮಿಯಾ ರೋಡ್ರಿಗಸ್, ರಾಧಾಯಾದವ್,
ಆಸ್ಟ್ರೇಲಿಯಾ : ಅಲ್ಸಾ ಹೀಲಿ (ವಿ.ಕೀ), ರಚೆಲ್ ಹೇಯ್ಸ್, ಮೆಗ್ ಲೆನ್ನಿಂಗ್ (ನಾಯಕಿ), ಮೆಗನಾ ಸ್ಕಾಟ್, ಜೆಸ್ ಜಾನ್ಸನ್, ದೆಲಿಶಾ ಕಿಮ್ಮಿನ್ಸ್, ಬೆಥ್ ಮೂನಿ, ನಿಕೋಲಾ ಕ್ಯಾರಿ, ಅಲ್ಶಿಗ್ ಗಾರ್ಡನರ್, ಸೋಫಿಯಾ ಮೊಲಿನಕ್ಸ್, ಜಾರ್ಜಿಯಾ ವಾರೆಮ್,

Leave A Reply

Your email address will not be published.