ಮಂಗಳವಾರ, ಏಪ್ರಿಲ್ 29, 2025
HomeBreakingಎಲೆಕ್ಷನ್ ಎಫೆಕ್ಟ್....!! 5 ರಾಜ್ಯಗಳ ಕರೋನಾ ಲಸಿಕೆ ಸರ್ಟಿಫಿಕೇಟ್  ನಿಂದ ಮೋದಿ ಪೋಟೋ ತೆರವು...!!

ಎಲೆಕ್ಷನ್ ಎಫೆಕ್ಟ್….!! 5 ರಾಜ್ಯಗಳ ಕರೋನಾ ಲಸಿಕೆ ಸರ್ಟಿಫಿಕೇಟ್  ನಿಂದ ಮೋದಿ ಪೋಟೋ ತೆರವು…!!

- Advertisement -

ನವದೆಹಲಿ : ಪಂಚ‌ರಾಜ್ಯಗಳ ಚುನಾವಣೆ ಎಫೆಕ್ಟ್ ಕೊರೋನಾ ಲಸಿಕೆ‌ ಮೇಲೂ ಬಿದ್ದಿದ್ದು, ಕೊರೋನಾ ಲಸಿಕೆ ಪ್ರಮಾಣಪತ್ರ ದಿಂದ ಮೋದಿ ಪೋಟೋ ತೆರವುಗೊಳ್ಳಲಿದೆ.

ಕೊರೋನಾ ಲಸಿಕೆ ಪ್ರಮಾಣ ಪತ್ರದಿಂದ ಮೋದಿ ಭಾವಚಿತ್ರ ಕೈಬಿಡುವಂತೆ‌ ಕಳೆದ ವಾರ  ಕೇಂದ್ರ ಚುನಾವಣಾ ಆಯೋಗ ಕೇಂದ್ರ ಆರೋಗ್ಯ ಇಲಾಖೆಗೆ ಸೂಚನೆ ನೀಡಿತ್ತು.

ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ.

ಮಾರ್ಚ್ 27 ರಿಂದ ಏಪ್ರಿಲ್ 29ರೊಳಗೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಕೊರೋನಾ ಲಸಿಕೆ ವಿತರಣೆಯು ನಡೆದಿದೆ. ಲಸಿಕೆ ಪಡೆದವರಿಗೆ ನೀಡಲಾಗುವ ಪ್ರಮಾಣ ಪತ್ರದ ಮೇಲೆ ಇರುವ ಮೋದಿ ಪೋಟೋ ನೀತಿ ಸಂಹಿತೆಯ ಉಲ್ಲಂಘನೆ ಎಂದು  ಮಮತಾ ಬ್ಯಾನರ್ಜಿ ಸೇರಿದಂತೆ  ಹಲವರು ಆರೋಪಿಸಿದ್ದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು‌ ನೀಡಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಹೆಸರು, ಪೋಟೋ,ಸಂದೇಶ ನೀಡುವ ಮೂಲಕ ಮೋದಿ ತಮ್ಮ ಅಧಿಕಾರ ದುರುಪಯೋಗ ಪಡಿಸಿ ಕೊಂಡಿದ್ದಾರೆ ಎಂದು ಹಲವರು ಆರೋಪಿಸಿ ದ್ದರು. ಹೀಗಾಗಿ ಪೋಟೋ ತೆರವಿಗೆ ಕೇಂದ್ರ ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ.

RELATED ARTICLES

Most Popular