ನಿತ್ಯಭವಿಷ್ಯ‌:12-03-2021 ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಮನಸ್ತಾಪ

ಮೇಷರಾಶಿ
ವಿನಾಕಾರಣ ನಿಂದನೆಯ ಸಂಭವವಿದೆ. ಖರ್ಚು ಹೆಚ್ಚಾಗುವುದು. ಯೋಗ ಇರುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವುದು.
ಅದೃಷ್ಟ ಸಂಖ್ಯೆ : 9

ವೃಷಭರಾಶಿ
ಕಾಯಕ ನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿರಿ.
ಅದೃಷ್ಟ ಸಂಖ್ಯೆ : 2

ಮಿಥುನರಾಶಿ
ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವುದು. ಹಳೆಯ ಸಾಲ ತೀರುವುದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧು ವರ್ಗದಲ್ಲಿಯ ಅಸಮಾಧಾನಗಳು ಪರಿಹಾರ ವಾಗುವವು.
ಅದೃಷ್ಟ ಸಂಖ್ಯೆ : 9

ಕರ್ಕರಾಶಿ
ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗ ದಲ್ಲಿ ಪ್ರಗತಿ ಇರುವುದು. ಅಹಂಭಾವ ದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗ ವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವದು.
ಅದೃಷ್ಟ ಸಂಖ್ಯೆ : 6

ಸಿಂಹರಾಶಿ
ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ. ಹಿರಿಯರ ಸಲಹೆ ದೊರೆಯುವದು.
ಅದೃಷ್ಟ ಸಂಖ್ಯೆ : 8

ಕನ್ಯಾರಾಶಿ
ಅಪೇಕ್ಷಿತ ಸ್ಥಾನಮಾನಗಳು ದೊರೆಯುವುವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂತ ಅಧಿಕ ಖರ್ಚು ಇರುವುದು.
ಅದೃಷ್ಟ ಸಂಖ್ಯೆ : 4

ತುಲಾರಾಶಿ
ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಅದೃಷ್ಟ ಸಂಖ್ಯೆ : 1

ವೃಶ್ಚಿಕರಾಶಿ
ವೃತ್ತಿಪರತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು.
ಅದೃಷ್ಟ ಸಂಖ್ಯೆ : 7

ಧನುರಾಶಿ
ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು.
ಅದೃಷ್ಟ ಸಂಖ್ಯೆ : 3

ಮಕರರಾಶಿ
ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗು ತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ.
ಅದೃಷ್ಟ ಸಂಖ್ಯೆ : 6

ಕುಂಭರಾಶಿ
ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧ ವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡು ಬರುವುದು. ಹಿರಿಯರ ಮಾತಿನಂತೆ ನಡೆಯುವುದು ಉತ್ತಮ.
ಅದೃಷ್ಟ ಸಂಖ್ಯೆ : 2

ಮೀನರಾಶಿ
ಆರಂಭದಲ್ಲಿ ಹರ್ಷ, ಉತ್ಸಾಹ ಇರುವದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ.
ಅದೃಷ್ಟ ಸಂಖ್ಯೆ : 1

ಶುಭಂಭವತು
#ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Comments are closed.