ಮಂಗಳೂರು : ಮಹಿಳೆಯೋರ್ವರು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸೋ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಬಸ್ಸಿನ ಕಂಡಕ್ಟರ್ ಚಾಲಕನಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಇಬ್ಬರೂ ಬಸ್ಸನ್ನು ಯಾವುದೇ ನಿಲ್ದಾಣದಲ್ಲಿಯೂ ನಿಲ್ಲಿಸದೇ ನೇರವಾಗಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಮಹಿಳೆಯ ಪ್ರಾಣ ಉಳಿಸಿದ್ದಾರೆ.
ಈ ಘಟನೆ ನಡೆದಿರೋ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ. ತಲಪಾಡಿಯಿಂದ ಸ್ಟೇಟ್ ಬ್ಯಾಂಕ್ ಪ್ರಯಾಣಿಸುತ್ತಿದ್ದ ಮಹೇಶ್ ಹೆಸರಿನ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಬಸ್ಸಿನ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಮಹಿಳೆಯ ಪ್ರಾಣ ಉಳಿಸಲು ಬಸ್ಸನ್ನು ಯಾವುದೇ ಸ್ಟಾಪ್ ನಲ್ಲಿ ನಿಲ್ಲಿಸದಿದ್ರೂ ಯಾವೊಬ್ಬ ಪ್ರಯಾಣಿಕರು ವಿರೋಧ ಮಾಡಲಿಲ್ಲ, ಬದಲಾಗಿ ಸಿಬ್ಬಂಧಿಗಳ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ರು. ಇದೀಗ ಖಾಸಗಿ ಬಸ್ ಸಿಬ್ಬಂಧಿಗಳ ಮಾನವೀಯತೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಹಿಳೆಗೆ ಬಸ್ಸಿನಲ್ಲಿ ಕಾಣಿಸಿಕೊಂಡಿತು ಎದೆನೋವು : ಬಸ್ ಚಾಲಕ, ನಿರ್ವಾಹಕ ಮಾಡಿದ್ರು ಜನಮೆಚ್ಚುಗೆಯ ಕಾರ್ಯ !
- Advertisement -
RELATED ARTICLES