ಹಾವೇರಿ: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ನಟ ಚಿರಂಜೀವಿ ಸರ್ಜಾ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿರ್ದೆಶಕ ಇಂದ್ರಜಿತ್ ಲಂಕೇಶ್ ವಿರುದ್ದ ಕಿಡಿಕಾರಿದ್ದಾರೆ.
ಸ್ಯಾಂಡಲ್ವುಡ್ನ ಹಲವು ನಟ, ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎನ್ನುವ ಮೂಲಕ ಚಿರಂಜೀವಿ ಸರ್ಜಾ ಅವರ ಸಾವಿನ ಬಗ್ಗೆಯೂ ಪ್ರಸ್ತಾಪಿಸಿದ್ದರು. ಚಿರು ಹೆಸರು ಪ್ರಸ್ತಾಪಿಸಿದ ಇಂದ್ರಜಿತ್ ವಿರುದ್ಧ ಹಲವರು ಗರಂ ಆಗಿದ್ದರು.

ಇಂದ್ರಜಿತ್ ಲಂಕೇಶ್ ಅವರು ಬಹಳ ದೊಡ್ಡ ಪ್ರಮಾಣದಲ್ಲಿ ಹೀರೋ ಆಗಲು ಹೊರಟಿದ್ದಾರೆ. ಅವರು ಫಿಲಂ ಲ್ಯಾಂಡ್ ಸುಧಾರಣೆಯಾಗಬೇಕು ಎನ್ನುತ್ತಿದ್ದಾರೆ. ಆದರೆ. ಅವರ ಸಹೋದರಿಯೊಬ್ಬರು ಡ್ರಗ್ಸ್ ಅಡಿಟ್ ಆಗಿದ್ದರು. ಆಗ ಅವರು ಎಲ್ಲಿ ಹೋಗಿದ್ದರು? ಎಂದು ಇಂದ್ರಜಿತ್ರನ್ನು ಪ್ರಮೋದ್ ಮುತಾಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಡ್ರಗ್ಸ್ ಜಾಲದ ಬಗ್ಗೆ ನೀವು ಮಾಹಿತಿ ಕೊಟ್ಟಿರಬಹುದು. ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದ್ರೆ, ದಿವಂಗತ ಚಿರಂಜೀವಿ ಸರ್ಜಾ ಅವರ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಎಂದು ಇಂದ್ರಜಿತ್ ಲಂಕೇಶ್ರನ್ನು ಪ್ರಶ್ನಿಸಿದ್ದಾರೆ.
ಸರ್ಜಾ ಫ್ಯಾಮಿಲಿ ಡ್ರಗ್ಸ್ನಂತಹದ್ದೆಲ್ಲ ಮಾಡಲ್ಲ. ಅವರದ್ದೇ ಆದರ್ಶ ಇಟ್ಟುಕೊಂಡು ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದಾರೆ. ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅವರು ಶುದ್ಧವಾಗಿದ್ದಾರೆ ಎಂದಿದ್ದಾರೆ.