ನವದೆಹಲಿ : ಎರಡನೇ ಹಂತದ ಕೊರೋನಾ ಲಸಿಕೆ 2.0 ಅಭಿಯಾನದ ಅಂಗವಾಗಿ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಲಸಿಕೆ ಪಡೆದಿದ್ದಾರೆ.
ಪ್ರಧಾನಿ ತಾಯಿ ಹೀರಾಬೆನ್ ಲಸಿಕೆ ಪಡೆದ ವಿಚಾರವನ್ನು ಸ್ವತಃ ಪ್ರಧಾನಿ ನರೇಂದ್ರಮೋದಿ ಕಾರ್ಯಾಲಯ ಟ್ವೀಟ್ ಮೂಲಕ ಖಚಿತಪಡಿಸಿದೆ.
ಇಂದು ನನ್ನ ತಾಯಿ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ನಿಮ್ಮ ಸುತ್ತ ಯಾರೆಲ್ಲ ಲಸಿಕೆ ಪಡೆಯಲು ಅರ್ಹರಿದ್ದಾರೋ ಅವರಿಗೆಲ್ಲ ಲಸಿಕೆ ಪಡೆಯುವಂತೆ ಮಾರ್ಗದರ್ಶನ ಮಾಡಿ ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಭಾರತದಲ್ಲಿ ಮಾರ್ಚ್ 1 ರಿಂದ ಎರಡನೇ ಹಂತದ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದ್ದು 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷದಿಂದ ಮೇಲ್ಪಟ್ಟ ಕಾಯಿಲೆ ಉಳ್ಳವರಿಗೆ ಲಸಿಕೆ ವಿತರಿಸ ಲಾಗುತ್ತಿದೆ. ಇದರ ಭಾಗವಾಗಿಯೇ ಪ್ರದಾನಿ ನರೇಂದ್ರ ಮೋದಿ ಇತ್ತೀಚಿಗೆ ಕೊರೋನಾ ಲಸಿಕೆ ಪಡೆದಿದ್ದರು.
ಅಷ್ಟೇ ಸ್ವತಃ ದೇಶಿಯ ಲಸಿಕೆಗಳನ್ನು ಪಡೆಯುವ ಮೂಲಕ ಮೋದಿಟೀಕಾಕಾರರ ಮಾತನ್ನು ಕಟ್ಟಿಹಾಕಿದ್ದರು. ಈಗ ತಾಯಿಗೂ ಲಸಿಕೆ ಕೊಡಿಸಿದ್ದಾರೆ.