ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ…! ಮಾರ್ಚ್ 26 ಕ್ಕೆ ಥಿಯೇಟರ್ ಗೆ ಬರಲಿದೆ ರಣಂ…!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದರೂ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ರಾಜಮಾರ್ತಾಡ್, ಶಿವಾರ್ಜುನ ಬಳಿಕ ಇದೀಗ ರಣಂ ಚಿತ್ರದ ಮೂಲಕ ಮತ್ತೊಮ್ಮೆ ತೆರೆಗೆ ಬರಲಿದ್ದು ಮಾರ್ಚ್ 26 ರಂದು ರಣಂ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ.

ಈಗಾಗಲೇ ಚಿರು ನಟಿಸಿ ಧ್ರುವ್ ಸರ್ಜಾ ಡಬ್ ಮಾಡಿರುವ ರಾಜಾಮಾರ್ತಾಂಡ್ ಕೂಡ ರಿಲೀಸ್ ಗೆ ಸಿದ್ಧವಾಗಿದ್ದು, ಚಿತ್ರದ ಟ್ರೇಲರ್ ನ್ನು ಜ್ಯೂನಿಯರ್ ಚಿರು ಲಾಂಚ್ ಮಾಡಿದ್ದರು. ಈಗ ರಣಂ ಚಿತ್ರ ಮಾರ್ಚ್ 26 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.

ರಾಜ್ಯದ 250ಕ್ಕೂ ಅಧಿಕ ಚಿತ್ರಮಂದಿರದಲ್ಲಿ ರಣಂ ತೆರೆ ಕಾಣಲಿದೆ. ಚಿರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿರುವ ಈ ಚಿತ್ರ ಚಿರು ನಟಿಸಿ, ತಾವೇ ಡಬ್ ಮಾಡಿದ ಕೊನೆಯ ಚಿತ್ರ. ರಾಜಾಮಾರ್ತಾಂಡ್ ಶೂಟಿಂಗ್ ಮುಗಿಸಿದ್ದ ಚಿರು ಡಬ್ಬಿಂಗ್ ವೇಳೆಗೆ ನಿಧನರಾಗಿದ್ದರು. ಹೀಗಾಗಿ ಧ್ರುವ್ ಸರ್ಜಾ ಅಣ್ಣನ ಪಾತ್ರಕ್ಕೆ ಧ್ವನಿಯಾಗಿದ್ದರು.

ವಿ.ಸಮುದ್ರ ನಿರ್ದೇಶನದ ರಣಂ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್. ಚಿನ್ನು ಸಂಗೀತವಿದೆ. ಆರ್.ಎಸ್. ಪ್ರೊಡಕ್ಷನ್ ಅಡಿಯಲ್ಲಿ ಕನಕಪುರ ಶ್ರೀನಿವಾಸ್ ಈ ಚಿತ್ರ ನಿರ್ಮಿಸಿದ್ದಾರೆ. ಕಿರಣಗೌಡ್ ಸಹ ಶ್ರೀನಿವಾಸ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ನಟ ಚೇತನ್, ವರಲಕ್ಷ್ಮೀಶರತ್ ಕುಮಾರ್, ಕಾರ್ತೀಕ್,ಅಭಿಲಾಶ್, ದಿ.ಬುಲೆಟ್ ಪ್ರಕಾಶ್, ಸಾಧುಕೋಕಿಲ್ ಸೇರಿದಂತೆ ಹಲವರು ನಟಿಸಿದ್ದಾರೆ.

Comments are closed.